ಚಿಕ್ಕೋಡಿ: ಚಿಕ್ಕೋಡಿಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಆರ ಡಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ ರಾಷ್ಟ್ರಧ್ವಜಾರೋಹಣ ಆಯೋಜಿಸಲಾಯಿತು. ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಸೇರಿದಂತೆ ಗಣ್ಯರು ಭುವನೇಶ್ವರಿ ದೇವಿಯ ಪ್ರತಿಮೆಗೆ ಪೂಜೆ ಸಲ್ಲಿಸಿದರು.
ನಂತರ, ಶಾಲಾ ಮಕ್ಕಳು ಕನ್ನಡ ಹಾಡುಗಳಿಗೆ ಗುಂಪು ನೃತ್ಯಗಳನ್ನು ಪ್ರದರ್ಶಿಸಿದರು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಭವ್ಯ ಪ್ರದರ್ಶನ ಮಾಡಲಾಯಿತು.
ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಭುವನೇಶ್ವರಿಯ ಪ್ರತಿಮೆಯನ್ನು ಹೊತ್ತ ಎತ್ತಿನ ಬಂಡಿಗೆ ಪೂಜೆ ಸಲ್ಲಿಸುವ ಮೂಲಕ ಭವ್ಯ ಕನ್ನಡ ರಾಜ್ಯೋತ್ಸವ ಮೆರವಣಿಗೆಯನ್ನು ಉದ್ಘಾಟಿಸಿದರು.
ಮೆರವಣಿಗೆಯ ಸಮಯದಲ್ಲಿ, ಯುವಕರು ನಮ್ಮ ಕನ್ನಡ ಭಾಷೆ ಮೇಲಿನ ಪ್ರೀತಿಯನ್ನು ಪ್ರದರ್ಶಿಸಿದರು ಮೆರವಣಿಗೆಯಲ್ಲಿ ವಿವಿದ ವೇಷ ಭೂಷಣಗಳನ್ನು ಧರಿಶಿ ಚಿಕ್ಕೋಡಿ ಬಸವ ವೃತ್ತ ಸೇರಿದಂತೆ ನಗರದಾದ್ಯಂತ ರಾಜ್ಯೋತ್ಸವವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು.
ರಾಜ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಎಂಎಲ್‌ಸಿಗಳಾದ ಪ್ರಕಾಶ್ ಹುಕ್ಕೇರಿ, ಚಿಕ್ಕೋಡಿ ಉಪವಿಭಾಗ ಅಧಿಕಾರಿಗಳಾದ ಶ್ರೀ ಸುಭಾಷ್ ಸಂಪಗಾವಿ,ಶ್ರೀಮತಿ ವೀಣಾ ಜಗದೀಶ್ ಕವಟಗಿಮಠ, ಇವರು ಕೂಡ ಮಾತನಾಡಿದರು.
ಕಾರ್ಯಕ್ರಮದ ಸಂದರ್ಭದಲ್ಲಿ. ತಹಸೀಲ್ದಾರರಾದ ಶ್ರೀ ರಾಜೇಶ್ ಬುರ್ಲಿ ಭೂರ್ಲಿ, ಸಿಪಿಐ ವಿಶ್ವನಾಥ ಚೌಗಲಾ, ನಗರಸಭೆ ಸದಸ್ಯರು, ಚಂದ್ರಕಾಂತ ಹುಕ್ಕೇರಿ, ಸಂಜು ಬಡಿಗೇರ್, ಸಂತೋಷ್ ಪೂಜಾರಿ, ಕೃಷ್ಣ ಕೆಂಚನ್ನವರ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




