ಕಾಗವಾಡ: ನವಂಬರ್ 2025 ರಂದು ಕಾಗವಾಡ ತಾಲೂಕಿನ ಕಾಗವಾಡ ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅತಿ ವಿಜ್ರಂಭಣೆಯಿಂದ ಆಚರಿಸಲಾಯಿತು.
ಮೊದಲಿಗೆ ಕಾಗವಾಡ ಮಿರಜ್ ರಸ್ತೆ ಎಲ್ಲಿರುವ ಕರ್ನಾಟಕದ ಹೆಬ್ಬಾಗಿಲು ಹತ್ತಿರ ಧ್ವಜಾರೋಹಣ ಮಾಡಲಾಯಿತು.

ಅಲ್ಲಿ ಕಿತ್ತೂರು ಕರ್ನಾಟಕ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆಯವರು ಊರಿನ ಮುಖಂಡರು ಪೊಲೀಸರು ಹಾಜರಿದ್ದರು.
ಕಾಗವಾಡ ಪಟ್ಟಣದ ಚನ್ನಮೃತದಲ್ಲಿ ಭುವನೇಶ್ವರಿ ಹಾಗೂ ಕಿತ್ತೂರಾಣಿ ಚೆನ್ನಮ್ಮ ಭಾವಚಿತ್ರದ ಪೂಜೆಯನ್ನು ತಾಲೂಕಾ ಆಡಳಿತ ಹಾಗೂ ಎಲ್ಲ ಸಂಘಟನೆಯವರು ಹಾಗೂ ಎಲ್ಲ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ಅತಿ ವಿಜ್ರಂಭಣೆಯಿಂದ ಪೂಜೆ ಮಾಡಲಾಯಿತು.
ಕಾಗವಾಡ ಪಟ್ಟಣದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.
ಈ ವೇಳೆಯಲ್ಲಿ ತಸಿಲ್ದಾರ್ ರವೀಂದ್ರ ಹಾದಿಮನಿ, ಗ್ರೇಡ್ 2 ತಶೀಲ್ದಾರ್ ರೇಷ್ಮಾ ಜಕಾತಿ, ಕೋರೆ, ಪಿಎಸ್ಐ ರಾಗವೇಂದ್ರ ಖೋತ, ಬಿ ಇ ಓ, ಹಾಗೂ ಸಿ ಡಿ ಪಿ ಓ, ಜ್ಯೋತಿ ಪಾಟೀಲ್, ಕಾಕಾ ಪಾಟೀಲ್, ವಿನಾಯಕ ಚೌಗಲಾ, ಕಿತ್ತೂರು ಕರ್ನಾಟಕ ಸೇನೆ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು ಸಾವಕಾರ, ರಾಜ್ಯ ಸಂಚಾಲಕರು ಶಿವಾನಂದ ನವಿನಾಳೆ, ತಾಲೂಕ ಅಧ್ಯಕ್ಷ ರವಿ ಪಾಟೀಲ್, ಉಪಾಧ್ಯಕ್ಷ ಸಚಿನ, ಸಿದ್ದು ಭಾನುಸೆ, ಜನಾರ್ಧನ್ ದುಂಡಾರೆ, ಅನಿಲ್ ದೇವಕರ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರು ಸಿದ್ದು ಒಡೆಯರ್, ಗಣೇಶ್ ಕೊಳೆಕರ, ಫಾರೂಕ್ ಅಲಾಸ್ಕರ್, ಪ್ರವೀಣ್ ಪಾಟೀಲ್, ಕೃಷ್ಣಾ ಡೊಂಡಾರೆ ಹಾಗೂ ಜೈ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷ ಬಸವರಾಜ ಮಗದುಮ್ ಇತರರು ಹಾಜರಿದ್ದರು.
ವರದಿ: ಚಂದ್ರಕಾಂತ ಕಾಂಬಳೆ




