ನಿಡಗುಂದಿ: ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಪ್ರಮುಖ ಬೀದಿಗಳಲ್ಲಿ ಕನ್ನಡ ಅಮ್ಮನ ಧ್ವಜವನ್ನು ಹಿಡಿದು ತಾಯಿ ಕನ್ನಡಮ್ಮನ ಭಾವಚಿತ್ರವನ್ನು ಮೆರವಣಿಗೆಯ ಮೂಲಕ ಸಂಗೀತ ವಾದ್ಯದೊಂದಿಗೆ ಸಾಲು ಸಾಲಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ದ್ಯಾಮವ್ವನ ಗುಡಿಯಿಂದ ಪ್ರಾರಂಭವಾದ ಮೆರವಣಿಗೆ ಪ್ರಮುಖ ಬೀದಿ ಬೀದಿಗಳಲ್ಲಿ ಕನ್ನಡದ ಅಭಿಮಾನದೊಂದಿಗೆ ಸರಕಾರಿ ಶಾಲಾ ಆವರಣದಲ್ಲಿ ಒಂದು ತಲುಪಿತು.
ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ದಂಡಾಧಿಕಾರಿಗಳು ಮಾತನಾಡಿದರು, ನಂತರ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ರಾಷ್ಟ್ರಮಟ್ಟದಕ್ಕೆ 2ನೇ ಬಾರಿ ಖೋ ಖೋ ಕ್ರೀಡೆಯಲ್ಲಿ ಪ್ರಥಮ ಸ್ಥಾನಗಳಿಸಿದ ಬೇನಾಳ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಎ. ಡಿ. ಅಮರಾವದಗಿ ತಹಶೀಲ್ದಾರ.ವೆಂಕಟೇಶ. ಬಸಪ್ಪ. ವಂದಾಲ ಕಾರ್ಯನಿರ್ವಾಹಕ ಅಧಿಕಾರಿ, ಪ್ರತಾಪ. ರಾ. ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ, ನಿಡಗುಂದಿ. ಎಸ್.ಬಿ. ಗೌಡರ ವೃತ್ತ ನಿರೀಕ್ಷಕರು.ಹಾಗೂ ಇ ಸಿ ಓ ಉದಯಕುಮಾರ್ ಬಶೆಟ್ಟಿ , ಬಿ ಟಿ ಗೌಡರ, ರಾಜು ಚಳ್ಳಮರದ, ಊರ ಮುಖಂಡರು, ವಿವಿಧ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಉಪಾಧ್ಯಾಯರು ಶಿಕ್ಷಕ ಶಿಕ್ಷಕಿರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ವರದಿ:ಅಲಿ ಮಕಾನದಾರ




