ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರ ಮತ್ತು ಹಲವಾರು ಸಬ್ದ್ ಚಿತ್ರಗಳು ಒಂದಿಗೆ ಮೆರವಣಿಗೆಯು ಪ್ರಾರಂಭವಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಾಗುತ್ತಾ ಬಸವೇಶ್ವರ ಕಲ್ಯಾಣ ಮಂಟಪಕ್ಕೆ ಆಗಮಿಸಿತು.
ವೇದಿಕೆ ಕಾರ್ಯಕ್ರಮ : ಪಟ್ಟಣದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸಕರಾದ ಮಲ್ಲಿಕಾರ್ಜುನ ರಾಜನಾಳ ಆಗಮಿಸಿ ಮಾತನಾಡಿದ ಅವರು ಅಂತರಾಷ್ಟ್ರೀಯ ಆಂಗ್ಲ, ರಾಷ್ಟ್ರೀಯ ಭಾಷೆ ಹಿಂದಿ ಭಾಷೆಗಳಿಗೆ ಸ್ವಂತ ಭಾ ಷೆಗಳ ಲಿಪಿಯನ್ನು ಬಳಸಿಕೊಳ್ಳುತ್ತಿವೆ ಆದರೆ ಕನ್ನಡವು ಸ್ವಾಂತ ಲಿಪಿಯನ್ನು ಹೊಂದಿರುವದಲ್ಲದೆ ಭಾಷೆಯ ವೈಶಿಷ್ಟತೆಯನ್ನು ವಿನೋಬಾ ಭಾವೆಯವರು ಕನ್ನಡ ಲಿಪಿಯನ್ನು ಲಿಪಿಗಳ ರಾಣಿ ಎಂದು ಕರೆದಿದ್ದಾರೆ
ಸನ್ 1799ರಲ್ಲಿ ಕರ್ನಾಟಕವು ಹರಿದು 4 ಭಾಗಗಳಾಗಿ ಹಾಗೂ ಕನ್ನಡ ಭಾಷೆಯನ್ನು ಮಾತನಾಡುವ ಸುಮಾರು 20 ಭಾಗಗಳಾಗಿ ಹಂಚಿ ಹೋದ ಕರ್ನಾಟಕವನ್ನು ಏಕೀಕರಣ ಮಾಡಲು ವಿಜಯಪುರ ಜಿಲ್ಲೆಆಲೂರು
ವೆಂಕಟರಾಯರು ಸೇರಿದಂತೆ ಸಾವಿರಾರು ಕನ್ನಡದ ಕಟ್ಟಾಳು ಗಣ್ಯಮಾನ್ಯರ ನೆತ್ತರವು ಹರಿದ ಅವಿರತ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣವಾಯಿತು ಇದನ್ನು ಕಾಪಾಡಿಕೊಂಡು ಹೋಗುವುದರ ಜೊತೆಗೆ ಉಳಿಸಿ ಬೆಳೆಸುವ ಅನಿವಾರ್ಯತೆಯೂ ಇದೆ ಎಂದರು.
ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು. ಇದೇ ಸಮಯದಲ್ಲಿ ಸಿದ್ಲಿಂಗ ಮಹಾಸ್ವಾಮಿಗಳು ವೈ ಎಸ್ ಸೋಮನಕಟ್ಟಿ ಜಗದೇವಿ ಗುಂಡಳ್ಳಿ ಶಿಲ್ಪಾ ಹಿರೇಮಠ ಪ್ರಕಾಶ್ ದೇಸಾಯಿ ವಿದ್ಯಾಧ ರ ಕಲಾದಗಿ ಸುನಿಲ್ ನಾಯಕ್ ಶಿವಾನಂದ್ ಡೋಣೂರ್ ಮತ್ತು ಹಲವಾರು ಸಂಘಟನೆಯ ಅಧ್ಯಕ್ಷ ಉಪಾಧ್ಯಕ್ಷರು ಸರ್ಕಾರಿ ಅಧಿಕಾರಿಗಳು ಊರಿನ ಮುಖಂಡರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




