ಚಿಕ್ಕೋಡಿ : ಪಟ್ಟಣದ ಮಾತಂಗಿ ಸಮಾಜದ ಹೃದಯ ಭಾಗದಲ್ಲಿರುವ ರುದ್ರಭೂಮಿಯು ಗಿಡಗಂಟಿಗಳಿಂದ ಕೂಡಿದ್ದು ಸಮಾಜದ ಯಾರಾದ್ರೂ ತೀರಿಹೋದಲ್ಲಿ ಅದರಲ್ಲೂ ಸಂಜೆ ರಾತ್ರಿ ಹೊತ್ತಿನಲ್ಲಿ ಎಲ್ಲ ಕಾರ್ಯಗಳನ್ನು ಮುಗಿಸಲು ತುಂಬಾ ಸಮಸ್ಯೆಗಳು ಆಗುತ್ತಿರುವುದನ್ನು ಮನಗಂಡು ಸಮಾಜದ ಹಿರಿಯರು ಸಮಾಜದ ಎಲ್ಲ ಯುವಕರ ಸಭೆಯನ್ನು ತುರ್ತಾಗಿ ಕರೆದು ಪುರಸಭೆಯ ಸಹಕಾರದೊಂದಿಗೆ ಸ್ಮಶಾನ ಭೂಮಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಕಲ್ಲಪ್ಪ ಈರಗಾರ್ ದಿಲೀಪ್ ಕಾಂಬಳೆ ನಿತಿನ್ ಕಾಂಬಳೆ ಉದಯ್ ಈರಾಗರ್ ಸುನಿಲ್ ಕಟ್ಟಿಮನಿ ಪರಶುರಾಮ್ ದಾವನೆ ವಿನಾಯಕ ತಂಗಡಿ ಮಹೇಶ್ ಕಾಂಬಳೆ ಸಮಾಜದ ಎಲ್ಲ ಯುವಕರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




