Ad imageAd image

ಮಗನಿಂದಲೇ ಹತ್ಯೆಯಾದ ದಿನೇಶ್ ಬಿಡಿ ಬ್ರ್ಯಾಂಡ್ ಮಾಲೀಕ  

Bharath Vaibhav
ಮಗನಿಂದಲೇ ಹತ್ಯೆಯಾದ ದಿನೇಶ್ ಬಿಡಿ ಬ್ರ್ಯಾಂಡ್ ಮಾಲೀಕ  
WhatsApp Group Join Now
Telegram Group Join Now

ಉತ್ತರ ಪ್ರದೇಶ : ಭಾರತದ ಪ್ರಮುಖ ಬೀಡಿ ಬ್ರ್ಯಾಂಡ್ ದಿನೇಶ್ ಬೀಡಿಯ ಮಾಲೀಕರಾಗಿದ್ದ ತಂದೆ ಸುರೇಶ್ ಚಂದ್ ಎಂಬುವವರನ್ನು ಮಗನೇ ಕೊಲೆಮಾಡಿರುವ ಘಟನೆ ಉತ್ತರ ಪ್ರದೇಶದ ವೃಂದಾವನದಲ್ಲಿ ನಡೆದಿದೆ. ಕುಡಿತದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.

1977ರಲ್ಲಿ ಕಂಪನಿ ಕಟ್ಟಿದ್ದ ಸುರೇಶ್ ಚಂದ್ ಅಗರ್ವಾಲ್ ದಿನೇಶ್ 555 ಬೀಡಿ ಮಾಲೀಕರಾಗಿ ಖ್ಯಾತಿ ಪಡೆದಿದ್ದರು. ಆದರೆ ಇತ್ತೀಚಿಗೆ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರು.

ಇನ್ನು ಮುಂದೆ ಮಗನೇ ಕಂಪನಿಯನ್ನು ನಡೆಸುತ್ತಾನೆ ಎಂದು ಅವರು ನಂಬಿದ್ದರು. ಆದರೆ ಅವರ ಮಗ ನರೇಶ್ ಅಗರ್ವಾಲ್​ಗೆ ಕುಡಿತದ ಚಟವಿತ್ತು. ಇದು ನಿತ್ಯವೂ ತಂದೆ-ಮಗನ ನಡುವೆ ಗಲಾಟೆಗೆ ಕಾರಣವಾಗುತ್ತಿತ್ತು.

ಶುಕ್ರವಾರ ರಾತ್ರಿ ಗೌರಾ ನಗರ ಕಾಲೋನಿಯಲ್ಲಿ, ತಂದೆ ಸುರೇಶ್ ಚಂದ್ರ ಅಗರ್ವಾಲ್ ತನ್ನ ಮಧ್ಯಮ ಮಗ ನರೇಶ್ ಜೊತೆ ಕ್ಷುಲ್ಲಕ ವಿಷಯಕ್ಕೆ ಜಗಳವಾಡಿದ್ದ. ಸುರೇಶ್ ಚಂದ್ ಹಾಗೂ ನರೇಶ್ ಅಗರ್ವಾಲ್ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು.

ಕೋಪದಿಂದ ನರೇಶ್ ತನ್ನ ತಂದೆಗೆ ಗುಂಡು ಹಾರಿಸಿದ್ದಾನೆ. ತಾನೇನೋ ಮಾಡಿದೆ ಎನ್ನುವ ಭಯದಲ್ಲಿ ತನ್ನ ಹಣೆಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಂದೆ ಹಾಗೂ ಮಗ ಇಬ್ಬರೂ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ  ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸುರೇಶ್ ಚಂದ್ ಅಗರ್ವಾಲ್ ತಮ್ಮ ಬಹುಕೋಟಿ ಮೌಲ್ಯದ ಬೀಡಿ ವ್ಯವಹಾರವನ್ನು ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಿಗೆ ವಿಸ್ತರಿಸಿದ್ದರು.

ವೃಂದಾವನದ ಪ್ರಮುಖ ಬೀಡಿ ಉದ್ಯಮಿ ಸುರೇಶ್ ಚಂದ್ರ ಅಗರ್ವಾಲ್ ಮತ್ತು ಅವರ ಪುತ್ರ ನರೇಶ್ ಅಗರ್ವಾಲ್ ಅವರ ಅಂತ್ಯಕ್ರಿಯೆ ಶನಿವಾರ ನಡೆದಿದೆ. ಜಿಲ್ಲೆಯಾದ್ಯಂತದ ಉದ್ಯಮಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ವ್ಯಾಪಾರ ಕುಟುಂಬದೊಳಗಿನ ದುರಂತ ಎಲ್ಲರ ಕಣ್ಣಲ್ಲಿ ನೀರು ತರಿಸಿತ್ತು.

ದಿನೇಶ್ ಬೀಡಿ ಎಂಬ ಹೆಸರಿನಲ್ಲಿ ಹಲವು ರಾಜ್ಯಗಳಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಿದ್ದ ದಿನೇಶ್ಚಂದ್ರ ಅಗರ್ವಾಲ್, ತನ್ನ ಮನೆಗೆ ಬಂದು ತನ್ನ ತಂದೆ ಮತ್ತು ತಮ್ಮನ ಶವಗಳನ್ನು ನೋಡಿ ಶಾಕ್‌ ಆಗಿದ್ದಾರೆ.

ನರೇಶ್ ಚಂದ್ರ ಅಗರ್ವಾಲ್ ತುಂಬಾ ಬೆರೆಯುವ ವ್ಯಕ್ತಿಯಾಗಿದ್ದರು. ಅವರು ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಆದಾಗ್ಯೂ, ಅವರ ಮದ್ಯದ ಚಟದಿಂದ ಅವರ ಶಾಂತ ನಡವಳಿಕೆಯೇ ದೂರವಾಗಿತ್ತು.

ಅವರ ಎಲ್ಲಾ ಸ್ನೇಹಿತರಿಗೆ ಅವರ ಅಭ್ಯಾಸದ ಬಗ್ಗೆ ತಿಳಿದಿದ್ದರೂ, ಯಾರೂ ಕೋಪ ಮಾಡಿಕೊಳ್ಳುತ್ತಿರಲಿಲ್ಲ. ಅವರು ಕೆಟ್ಟದಾಗಿ ವರ್ತಿಸಿದಾಗ, ಅಚರೇ ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದರು ಎಂದು ದಿನೇಶ್ಚಂದ್ರ ಅಗರ್ವಾಲ್ ತಿಳಿಸದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!