ಮೈಸೂರು ಸಮೀಪದ ಸರ್ಕಾರಿ ಪ್ರೌಢಶಾಲಾವರಣದಲ್ಲಿದ್ದ ಗಂಧದ ಮರಗಳ ಮೇಲೂ ಕಳ್ಳರು ಕಣ್ಣಿಟ್ಟು ಕದ್ದೊಯ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಘಟನೆ ನಡೆದಿದ್ದು- ಎರಡು ದಿನ ರಜೆ ಇದ್ದ ಹಿನ್ನೆಲೆ ಸೋಮವಾರ ಬೆಳಗ್ಗೆ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಶಾಲೆಯ ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಸೆರೆಯಾಗಿದ್ದು ನಾಲ್ಕು ಮಂದಿ ಖದೀಮರು ಈ ಕೃತ್ಯ ಎಸಗಿದ್ದಾರೆ.
ಶಾಲಾವರಣದಲ್ಲಿ ಒಟ್ಟು 26 ಶ್ರೀಗಂಧದ ಮರಗಳನ್ನು ಬೆಳೆಸಲಾಗಿತ್ತು. ಇವುಗಳಲ್ಲಿ, 3 ನ್ನು ಕತ್ತರಿಸಿದ್ದು ಒಂದು ಮರವನ್ನು ಕದ್ದೊಯ್ದಿದ್ದಾರೆ. ಕಳ್ಳರನ್ನು ಶೀಘ್ರವೇ ಪತ್ತೆಹಚ್ಚಿ, ಮುಂದೆ ಈ ರೀತಿ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ: ಆನಂದ್ ಕುಮಾರ್ ವಡಗೆರೆ




