ಖಾನಾಪುರ: ಹೌದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹಿರೇಹಟ್ಟಿಹೊಳಿ ಗ್ರಾಮ ಪಂಚಾಯಿತಿಯ ನೂತನವಾಗಿ ನಿರ್ಮಾಣವಾದ ಭಾರತ ನಿರ್ಮಾಣ ರಾಜೀವಗಾಂದಿ ಸೇವಾ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಕಾರ್ಯಾಲಯವು ಅಧ್ಯಕ್ಷ ಶ್ರೀಧರ ಲವಗಿ, ಉಪಾಧ್ಯಕ್ಷ ನೇತ್ರಾವತಿ ಗುಂಡಣ್ಣನವರ್ ಹಾಗೂ ಪಿ.ಡಿ ಓ ರಾಜು ತಳವಾರ ಹಾಗೂ ಸರ್ವಸದಸ್ಯರ ನೇತೃತ್ವದಲ್ಲಿ, ಎಲ್ಲಾ ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಉದ್ಘಾಟನೆ ಗೊಂಡಿತು.
ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಉದ್ಘಾಟನೆಗೊಂಡ ಖಾನಾಪುರ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಆದ ರಮೇಶ್ ಮೆತ್ರಿ, ಅತಿಥಿಗಳಾಗಿ ಆಗಮಿಸಿದ ಮೃಣಾಲ್ ಹೆಬ್ಬಾಳ್ಕರ್, ರಶ್ಮಿ ಸುತಗಟ್ಟಿ, ಕಾಂಗ್ರೆಸ್ ಮುಖಂಡ ಅಶೋಕ್ ಅಂಗಡಿ ಸೇರಿದಂತೆ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಗಣ್ಯರನ್ನು ಹೃದಯಪೂರ್ವಕವಾಗಿ ಸನ್ಮಾನ ಮಾಡಲಾಯಿತು.
ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅದ್ಯಕ್ಶ ಶ್ರೀಧರ ಲವಗಿ, ಪಿ.ಡಿ.ಓ ರಾಜು ತಳವಾರ ಹಾಗೂ ಗ್ರಾ.ಪಂ ಸದಸ್ಯ ಸಂಜು ಸೂಳೇಬಾವಿ, ಭರತೇಶ್ ಜೋಳದ್, ಭಾಗ್ಯಶ್ರೀ ಹಣಬರ, ರಾಜೇಶ್ವರಿ ಹುಚ್ಚನನವರ್ ಮಾತನಾಡಿದರು. ಒಟ್ಟಾರೆ ಅದ್ದೂರಿಯಾಗಿ ಹಿರೇಹಟ್ಟಿಹೊಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಗೊಂಡಿತು.
ವರದಿ: ಬಸವರಾಜು




