ಐನಾಪುರ: ಸತ್ಯಸಿದ್ದರು ಪ್ರತ್ಯಕ್ಷ ದೇವರು, ಅವರು ಮಾತಾಡಿದ್ದೆ ಸತ್ಯ ಆಗುತ್ತಿತ್ತು, ಅವರು ತಮಗಾಗಿ ಏನನ್ನು ಬಯಸದೆ ಭೋಗವನ್ನು ನಿರಾಕರಿಸಿ ಮಹಾನ್ ಯಾಗಿಗಳಾದ ಇವರು ಇಡೀ ಮನುಷ್ಯ ಸಂಕುಲವನ್ನು ಹೊಟ್ಟೆ ತುಂಬ ಉಣ್ಣುವುದನ್ನು ಹಾಗೂ ಸಂತೃಪ್ತಿಯನ್ನು ಬಯಸುತ್ತಿರುವುದೇ ರೊಟ್ಟಿ ಜಾತ್ರೆಯ ಮಹಿಮೆ ಎಂದು ಕವಲಗುಡ್ಡ ಸಿರಿಸಿದ್ದಾಶ್ರಮದ ಅಮರೇಶ್ವರ ಮಹಾಸ್ವಾಮಿಗಳು ನುಡಿದರು.

ಅವರು ಐನಾಪುರ ಪಟ್ಟಣದಲ್ಲಿ ದಿ 9 ರಿಂದ 11 ವರೆಗೆ ನಡೆಯುವ 51 ಸತ್ಯ ಸಿದ್ದರ ಭಟ್ಟಿಯ ನಿಮಿತ್ಯ ರವಿವಾರ 2 ರಂದು ರೊಟ್ಟಿ ಜಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಾ, ನಮ್ಮ ಭಾಗದ ದೈವಗಳ ಪವಿತ್ರ ಪ್ರಸಾದವೆಂದರೆ ನಾವು ದಿನನಿತ್ಯ ಸೇವಿಸುವ ಅಂಬಲಿ, ಕಿಚಡಿ, ಪುಂಡಿ ಪಲ್ಲೆ, ಜೋಳದ ನುಚ್ಚು, ಹಾಗೂ ಜೋಳದ ರೊಟ್ಟಿ ಅಂತಹ ಪ್ರಸಾದಗಳು. ಅದರ ಹಿಂದಿನ ಬಹುದೊಡ್ಡ ಆಶಯವೆಂದರೆ ಪ್ರಪಂಚದ ಎಲ್ಲಾ ಬಡಬಗ್ಗರಿಗೆ ಇಂತಹ ಪ್ರಸಾದ ಸಿಗಬೇಕು ಇದೇ ದೇವರುಗಳಿಗೆ ನೈವೇದ್ಯ ಎಂದರು.
ನಾವು ದಿನನಿತ್ಯ ಸೇವಿಸುವ ಸಮಾಜದ ಕಟ್ಟ ಕಡೆಯ ವ್ಯಕ್ತಿಯು ತಿನ್ನುವ ಆಹಾರವೇ ನಮ್ಮ ದೈವಗಳಿಗೆ ಪವಿತ್ರವಾದ ಮಹಾಪ್ರಸಾದ ಅದಕ್ಕಾಗಿ ಈ ರೊಟ್ಟಿ ಜಾತ್ರೆ ಈ ಜಾತ್ರೆಯಲ್ಲಿ ಭಾಗವಹಿಸುವವರು ಮಹಾ ಪುಣ್ಯವಂತರು, ನಮ್ಮ ಸತ್ಯಸಿದ್ದರು ಶ್ರೀಮಂತರು ಅನ್ನುವಂತಹ ಆಹಾರವನ್ನು ಬಯಸುತ್ತಿರಲಿಲ್ಲ, ಜನಸಾಮಾನ್ಯರು ಬಯಸುವ ಆಹಾರವೇ ದೇವರಿಗೆ ನೈವೇದ್ಯ ಎಂದರು.

ಈ ರೊಟ್ಟಿ ಜಾತ್ರೆಯಲ್ಲಿ ಐನಾಪುರ್ ಪಟ್ಟಣದ ಮಾಳಿ ಸಮಾಜದ ಎಲ್ಲಾ ಬಾಂಧವರು, ಕೋರ್ಬು, ಜಂತನ್ನವರ್, ಬಡಿಗೇರ ಗಲ್ಲಿ, ಸೇರಿದಂತೆ ಪಟ್ಟಣದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ರೊಟ್ಟಿ ಜಾತ್ರೆಯಲ್ಲಿ ಭಾಗವಹಿಸಿದ್ದರು ಈ ವೇಳೆ ದಾದಾ ಸಾಬ್ ಜಂತನ್ನವರ್, ಪ್ರಕಾಶ್ ಕೋರ್ಬು, ಸುರೇಶ್ ಕಾಗಲಿ, ಶ್ರೀಶೈಲ ನಾಂದನಿಕರ್, ಶಿವಾನಂದ ಬೆಳಕೂಡ, ಅಪ್ಪಾಸಾಬ ಕಾಗಲಿ, ಸುದರ್ಶನ್ ಜಂತನ್ನವರ್, ಕಾಳಪ್ಪ ಬಡಿಗೇರ್, ಹನುಮಂತ ಸೊಂದಕರ, ಬಸವರಾಜ ಜೀರಗಾಳಿ, ನಿತಿನ್ ತೊಡಕರ್, ಅಪ್ಪಾಸಾಬ ಕಾರ್ತಗಿ ಸೇರಿದಂತೆ ಸಾವಿರಾರು ಜನ ಮಹಿಳೆಯರು ಹಾಗೂ ಪುರುಷರು ಉಪಸ್ಥಿತರಿದ್ದರು.
ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಪಿಕೆಪಿಎಸ್ ಬ್ಯಾಂಕಿನಿಂದ ಬೃಹತ್ ರೊಟ್ಟಿ ಜಾತ್ರೆ ಸಕಲ ಮಂಗಳವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಕೆರಿಸಿದ್ದೇಶ್ವರ ದೇವಸ್ಥಾನದ ವರೆಗೆ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಮುರಗೇಶ ಗಸ್ತಿ




