Ad imageAd image

ಪೂರ್ವ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮನವಿ

Bharath Vaibhav
ಪೂರ್ವ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮನವಿ
WhatsApp Group Join Now
Telegram Group Join Now

ಸೇಡಂ: ತಾಲೂಕಿನ ಮಲ್ಕಪಲ್ಲಿ ಗ್ರಾಮದಲ್ಲಿ 2009-10ನೇ ಸಾಲಿನಲ್ಲಿ ಪೂರ್ವಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡವು ನಿರ್ಮಾಣವಾಗಿರುತ್ತದೆ ಆದರೆ ಸದರಿ ಕಟ್ಟಡವು ನಿರ್ಮಾಣವಾಗಿ ಸುಮಾರು 15 ವರ್ಷಗಳು ಕಳೆದರು ಅದು ಇಂದಿಗೂ ಉದ್ಘಾಟನೆಯಾಗಿಲ್ಲ.

ಪ್ರಯುಕ್ತ ಖಾಸಗಿಯವರ ಕಟ್ಟಡದಲ್ಲಿ ಈ ಆರೋಗ್ಯ ಕೇಂದ್ರ ನಡೆಯುತ್ತಿದೆ ಕಾರಣ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರವು ಉದ್ಘಾಟನೆ ಕಾಣದೆ ಸಂಪೂರ್ಣ ಹಾಳಾಗಿರುತ್ತದೆ ಮತ್ತು ಶಿಥಿಲವ್ಯವಸ್ಥೆಯಲ್ಲಿದೆ ಮತ್ತು ಬಿಲ್ಡಿಂಗ್ ಕುಸಿದು ಹೋಗುವ ಸಾಧ್ಯತೆ ಇದೆ.

ಅದ ಕಾರಣ ಸಮಸ್ತ ಮಲ್ಕಪಲ್ಲಿ ಗ್ರಾಮದ ಸಾರ್ವಜನಿಕರ ಮನವಿ ಮಾಡುವುದೇನೆಂದರೆ ಹಳೆಯ ಆರೋಗ್ಯ ಕೇಂದ್ರದ ಬದಲು ಹೊಸ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಿ ಹೊಸ ಜಾಗದಲ್ಲಿ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿ ಊರಿನ 2500 ಜನ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಇದರಿಂದ ಸುತ್ತಮುತ್ತಲಿನ ಹಳ್ಳಿಗಳಾದ ಭೀಮಸಾಗರ, ಸೋನಾರ್ ತಾಂಡಾ, ನಲ್ಲಗುಡ್ಡ ತಾಂಡಾ ಸಾರ್ವಜನಿಕರಿಗೆ ಕೂಡ ಅನುಕೂಲ ಆಗುತ್ತದೆ ಎಂದು ಮಲ್ಕಪಲ್ಲಿ ಗ್ರಾಮಸ್ಥರ ಪರವಾಗಿ ಗ್ರಾಮ ಪಂಚಾಯತ್ ಸದಸ್ಯರಾದ ನವದ ರೆಡ್ಡಿ, ನರಸಿರೆಡ್ಡಿ, ರಾಜುರೆಡ್ಡಿ, ಶೇಖರ ಮತ್ತು ಗ್ರಾಮಸ್ಥರು ನೇತೃತ್ವದಲ್ಲಿ ತಾಲೂಕ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲಿಸಿದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!