ಯರಗಟ್ಟಿ: ರೈತ ಬೆಳೆದ ಕಬ್ಬಿಗೆ 3500 ಬೆಲೆ ಗೋಸಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ, ಭಾರತೀಯ ಕೃಷಿ ಸಮಾಜ, ಆಲ್ ಇಂಡಿಯಾ ಕಿಸಾನ್ ಕೇತ್ ಸಂಘಟನೆ, ಯರಗಟ್ಟಿ ಹಾಗೂ ಕೂಲಿ ಕಾರ್ಮಿಕರ ಸಂಘಟನೆ ಮತ್ತು ರೈತ ಹಿತ ರಕ್ಷಣಾ ವೇದಿಕೆ ಇವರಿಂದ ಯರಗಟ್ಟಿ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತಿದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹಾಗೂ ಸರ್ಕಾರಕ್ಕೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದ ಅವರು “ರೈತ ಎಂದರೆ ಅನ್ನದಾತ” ಏಕೆಂದರೆ ಅವರು ತಮ್ಮ ಕಠಿಣ ಪರಿಶ್ರಮದ ಮೂಲಕ ಬೆಳೆಗಳನ್ನು ಬೆಳೆದು, ಪ್ರತಿಯೊಬ್ಬರಿಗೂ ಆಹಾರವನ್ನು ಒದಗಿಸುತ್ತಾರೆ. ಅನ್ನದಾತ ಎಂದರೆ “ಅನ್ನವನ್ನು ಕೊಡುವವನು” ಎಂದರ್ಥ, ಮತ್ತು ರೈತರು ದೇಶದ ಆರ್ಥಿಕತೆಯ ಅಡಿಪಾಯವಾಗಿದ್ದು, ಅವರು ನೀಡುವ ಆಹಾರದಿಂದ ನಮ್ಮೆಲ್ಲರ ಜೀವನ ಸಾಧ್ಯ ಅಂತಾ ರೈತನಿಗೆ ಇಂದು ಸಂಕಷ್ಟ ಎದುರಾಗಿದೆ ಅವರು ಬೆಳೆದ ಬೆಳೆಗೆ ಸೂಕ್ತ ಬೆಲೆ ಘೋಷಣೆ ಮಾಡುವಂತೆ ಆಗ್ರಹಿಸಿದರು.
ನಂತರ ರೈತ ಮುಖಂಡ ಪಂಚನಗೌಡ ದ್ಯಾಮನಗೌಡರ ಮಾತನಾಡಿದ ಅವರು “ರೈತ ದೇಶದ ಬೆನ್ನೆಲುಬು” ಎನ್ನುವ ಸರಕಾರ ಕೂಡಲೇ ಎಚ್ಚೆತ್ತ ಕಬ್ಬಿಗೆ 3500 ಬೆಂಬಲ ಬೆಲೆ ಘೋಷಣೆ ಮಾಡುವಂತೆ ಆಗ್ರಹಿಸಿ ಇಂದು ರಸ್ತೆ ಬಂದ್ ಮಾಡಿ ಪ್ರತಿಭೆ ಪ್ರಾರಂಭವಾಗಿದೆ ಮುಂಬರುವ ದಿನಗಳಲ್ಲಿ ತಹಶೀಲ್ದಾರ ಕಚೇರಿ, ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ, ಸಬ್ ರಿಜಿಸ್ಟರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ, ಸತ್ತಿಗೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೆ.ಶಿವಾಪೂರದ ಮರಳುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ರೈತ ಮುಖಂಡರಾದ ವೆಂಕಟೇಶ ದೇವರಡ್ಡಿ, ಪಂಚನಗೌಡ ದ್ಯಾಮನಗೌಡರ, ವಿಶಾಲಗೌಡ ಪಾಟೀಲ, ಯಲ್ಲಪ್ಪಗೌಡ ಪಾಟೀಲ, ಮಹಾಂತೇಶ ತೋಟಗಿ, ಪುಂಡಲೀಕ ಮೇಟಿ, ಮಹಾದೇವ ಯಂಡ್ರಾವಿ, ಬಸವರಾಜ ಬಿಜ್ಜೂರ, ರಾಷ್ಟ್ರೀಯ ರೈತ ಸಂಘದ ರಾಷ್ಟ್ರಾಧ್ಯಕ್ಷ ಶಿವಲಿಂಗಪ್ಪ ನುಗ್ಗಾನಟ್ಟಿ, ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ಸೋಮು ರೈನಾಪೂರಜಿಲ್ಲಾ ಸಂಚಾಲಕ ರವಿ ನಾಡಗೌಡರ, ಲಕ್ಕಪ್ಪ ಬಿಜ್ಜನವರ, ತುಕಾರಾಂ ನಾಯ್ಕರ, ಯಂಕಣ್ಣಾ ಹುರಕನ್ನವರ, ರಾಯಣ್ಣಾ ಯರಗಟ್ಟಿ, ನ್ಯಾಯವಾದಿಗಳಾದ ಸಿ. ಬಿ. ಯಡಳ್ಳಿ, ವಾಯ್. ಬಿ. ನರಿ, ಮಾಜಿ ಸೈನಿಕರಾದ ಕುಮಾರ ಹಿರೇಮಠ, ಮುತ್ತು ವೀರಾಪೂರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
ವರದಿ: ಈರಣ್ಣಾ ಹೂಲ್ಲೂರ




