Ad imageAd image

ಕಬ್ಬಿನ ಬೆಲೆ ರೂ 3500 ನಿಗದಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ

Bharath Vaibhav
ಕಬ್ಬಿನ ಬೆಲೆ ರೂ 3500 ನಿಗದಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ
WhatsApp Group Join Now
Telegram Group Join Now

ಬಡಸ್ ಕ್ರಾಸ್, ಪಾರಿಶ್ವಾಡ: ಕಬ್ಬಿನ ಬೆಲೆ ರೂ 3500 ನಿಗದಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಾನಾ ರೈತ ಸಂಘಟನೆಯ ಕಾರ್ಯಕರ್ತರು ಹಾಗೂ ನೂರಾರು ಕಬ್ಬು ಬೆಳೆಗಾರರು ಇಂದು ಬಡಸ್ ಕ್ರಾಸ್ ನಲ್ಲಿ ರಸ್ತೆ ಸಂಚಾರವನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಿದ್ದರು ಹಾಗೂ ಪ್ರತಿಭಟನೆಯನ್ನು ಮಾಡಿ ಪ್ರತಿಯೊಬ್ಬ ರೈತರು ತಮ್ಮ ಮಾತಿನಿಂದಲೇ ಸಕ್ಕರೆ ಕಾರ್ಖಾನೆಯ ಮಾಲೀಕರಿಗೆ ಮತ್ತು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು ಮಾನ್ಯ ತಹಶೀಲ್ದಾರಾದ ಶ್ರೀ. ದುಂಡಪ್ಪ ಕೋಮಾರ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಬಾಗೇವಾಡಿಯ ಬಸವೇಶ್ವರ ಸರ್ಕಲ್ ಬಳಿ ಕೂಡ ಬೈಲಹೊಂಗಲ ಹೋಗುವ ಮಾರ್ಗವನ್ನು ಸುಮಾರು ಹೊತ್ತು ಬಂದ್ ಮಾಡಿದ್ದರು ನಂತರ ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿಯ ಗೌರವ ಅಧ್ಯಕ್ಷರಾದ  ಬಸವರಾಜ ಕಲಾರಕೊಪ್ಪ, ರೈತರ ಮುಖಂಡರಾದ  ಚಂದ್ರಗೌಡ ಗಿಡಬಸವನ್ನವರ್, ಕರ್ನಾಟಕ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾದ ದಶರಥ ಬನೋಸಿ ಹಾಗೂ ಶಾಖಾಧ್ಯಕ್ಷರಾದ ನಾಗರಾಜ ಗಿಡಬಸವನ್ನವರ್, ರೈತ ಮುಖಂಡರಾದ ವಿಠ್ಠಲ ಗಾಟಗಿ, ಸೋಮನಾಥ ಕುರುಬರ, ಸುನೀಲ ದಳವಾಯಿ ಹಾಗೂ ಹಲವಾರು ರೈತರು ಹಾಗೂ ಲೈಲಾ ಶುಗರ್ಸ್ ಓಪನ್ ಆಗಿರುವ ಕುರಿತು ಮಾಹಿತಿ ಪಡೆದು ಅಲ್ಲಿಗೆ ತೆರಳಿ ಅದನ್ನು ಮುತ್ತಿಗೆ ಹಾಕಿ ಬಂದ್ ಮಾಡಿಸಿದ್ದರು ಹಾಗೂ ದರ ನಿಗದಿ ಆಗುವವರೆಗೂ ಬಂದ್ ಮಾಡಬೇಕೆನ್ನು ಆಗ್ರಹಿಸಿದ್ದರು.

ವರದಿ: ಭರತ ಪವಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!