ಹುಕ್ಕೇರಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘ ಮತ್ತು ಇನ್ನು ಅನೇಕ ಸಂಘ ಸಂಸ್ಥೆಗಳ ಸೇರಿಕೊಂಡು ಹುಕ್ಕೇರಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡುವುದರ ರೈತರ ಬೇಡಿಕೆಗಳನ್ನು ನಿಲ್ಲಿಸಬೇಕು.
ಇಲ್ಲವಾದಲ್ಲಿ ಇನ್ನೂ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡುತ್ತಾ ಜಯ ಘೋಷಣೆ ಕೂಗುತ್ತಾ ಹುಕ್ಕೇರಿ ಶ್ರೀ ಅಡಿವಿ ಸಿದ್ದೇಶ್ವರ ಮಠದಿಂದ ಎಲ್ಲಾ ರೈತರ ಸೇರಿ ಮೆರವಣಿಗೆ ಮೂಲಕ ತಮ್ಮ ಪ್ರತಿಕಾರವನ್ನು ಹೊರ ಹಾಕಿದರು.
ನಂತರ ಬಸವೇಶ್ವರ ಸರ್ಕಲನಲ್ಲಿ ಎಲ್ಲ ರೈತರು ಒಂದುಗೂಡಿ ತಮ್ಮ ಬೇಡಿಕೆಗಳನ್ನು ಎತ್ತಿ ಹೇಳುತ್ತಾ ಜಯ ಘೋಷ ಮಾಡುತ್ತಾ ಫ್ಯಾಕ್ಟರಿ ಮಾಲಿಕ ವಿರುದ್ಧ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ಸಮಯದಲ್ಲಿ ರೈತರು ಅಷ್ಟೇ ಅಲ್ಲದೆ ಮಾಜಿ ಸೈನಿಕರು ನ್ಯಾಯವಾದಿಗಳು ಇನ್ನು ಅನೇಕ ಸಂಘ ಸಂಸ್ಥೆಗಳು ಕೂಡ ಒಂದು ಬೃಹಪ್ರ ಪ್ರತಿಭಟನೆಗೆ ಸಾಕ್ಷಿಯಾದರೂ ಈ ಒಂದು ಪ್ರತಿಭಟನೆಯ ಸಮಯದಲ್ಲಿ ಹುಕ್ಕೇರಿ ಎಲ್ಲ ಅಂಗಡಿಯ ಮಾಲೀಕರು ಸ್ವಯಂ ಪ್ರೇಮಿತವಾಗಿ ಬಂದು ಮಾಡಿ ಈ ಒಂದು ಪ್ರತಿಭಟನೆಯಲ್ಲಿ ಭಾಗಿಯಾದರು.
ಮತ್ತು ಹುಕ್ಕೇರಿಯ ಪೊಲೀಸ್ ಇಲಾಖೆ ವತಿಯಿಂದ ಒಂದು ಒಳ್ಳೆ ಸಹಕಾರ ನೀಡಿದ್ದು ಮತ್ತು ಹುಕ್ಕೇರಿಯ ಪತ್ರಿಕಾ ಮಾಧ್ಯಮದವರು ನಮ್ಮ್ ಹೋರಾಟಕ್ಕೆ ಪ್ರತಿಭಟನೆಗೆ ದಿನ ನಿತ್ಯ ಸುದ್ದಿ ಪ್ರಸಾರ ಮಾಡಿರುವುದನ್ನು ಎಲ್ಲಾ ಪತ್ರಿಕಾ ಮಾಧ್ಯಮದವರಿಗೆ ಧನ್ಯವಾದಗಳು ಎಂದು ರೈತ ಸಂಘದ ಮುಖಂಡರಾದ ಗೋಪಾಲ ಮರಬಸನ್ನವರ ಹಾಗೂ ರೈತ ಸಂಘ ಎಲ್ಲ ಮುಖಂಡರು ಧನ್ಯವಾದ ಎಂದು ಮಾಧ್ಯಮದೊಂದಿಗೆ ಹೇಳಿದರು.
ವರದಿ: ಶಿವಾಜಿ ಎನ್ ಬಾಲೆಶಗೋಳ




