———————————————–ಕಬ್ಬು ದರ ನಿಗದಿ ಮಾಡದ ಕಾರ್ಖಾನೆಗಳು!
ನಿಪ್ಪಾಣಿ: ಕೊಲ್ಲಾಪುರ ಜಿಲ್ಲೆಯ ಬಿದ್ರಿ ಸಕ್ಕರೆ ಕಾರ್ಖಾನೆಗಳು 3614ರೂಪಾಯಿ ಧರಘೋಷಿಸಿದೆ. ಆದರೆ ಕರ್ನಾಟಕದಲ್ಲಿಯ ಸಕ್ಕರೆ ಕಾರ್ಖಾನೆಗಳು ಎಫ್ ಆರ್ ಪಿ ದರಘೋಷಿಸದೆ ಕಬ್ಬು ಕಟಾವಿಗೆ ಅನುಮತಿ ನೀಡುತ್ತಿದ್ದು ಬಿದ್ರಿ ಸಕ್ಕರೆ ಕಾರ್ಖಾನೆ ನೀಡಿದ ದರದಂತೆ ಮುಷ್ಕರದಿಂದ ತಡೆ ಹಿಡಿಯಲಾದ ಕಬ್ಬು ತುಂಬಿದ ವಾಹನಗಳನ್ನು ಈ ಕಾರ್ಖಾನೆಗೆ ಕಳಿಸಲಾಗುವುದು.ಎಂದು ಜೈ ಕಿಸಾನ್ ರೈತ ಸಂಘಟನೆ ಅಧ್ಯಕ್ಷ ರಮೇಶ್ ಪಾಟೀಲ ತಿಳಿಸಿದರು.

ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಸರ್ಕಲದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಕಬ್ಬು ದರ ನಿಗದಿಗೆ ಆಗ್ರಹಿಸಿ ನಡೆಸುತ್ತಿರುವ ರೈತ ಸಂಘಟನೆಯ ಪ್ರತಿಭಟನೆ ಯಲ್ಲಿ ಮಾತನಾಡಿದರು. ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ನೀಡಬೇಕೆಂದು ಆಗ್ರಹಿಸಿ ಜಿಲ್ಲೆಯಲ್ಲಿಯ ಗುರ್ಲಾಪುರ್ ನಿಪ್ಪಾಣಿ, ಭೋಜ, ಬೇಡಕಿಹಾಳ, ಶಮನೆವಾಡಿ ಗ್ರಾಮಗಳಲ್ಲಿ ರೈತ ಸಂಘಟನೆಗಳು ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ ಟ್ರಾಲಿ ಗಳನ್ನು ತಡೆದು ಕಳೆದ ಶನಿವಾರ (ದಿನಾಂಕ 1ರಿಂದ)ಪ್ರತಿಭಟನೆ ನಡೆಸಿದ್ದು. ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಶನಿವಾರ ಸಂಜೆ ಶಮನೆ ವಾಡಿ ಗ್ರಾಮದಲ್ಲಿ ಕಾಗಲ್, ಹುಪರಿ ಕೊಲ್ಲಾಪುರ್ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುತ್ತಿದ್ದ 40ಕ್ಕೂ ಅಧಿಕ ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರಾಲಿ ತಡೆದು ಪ್ರತಿಭಟನೆ ನಡೆಸಿದ್ದಾರೆ.ಈ ಸಂಧರ್ಭದಲ್ಲಿ ಸ್ವಾಭಿಮಾನಿ ರೈತ ಸಂಘಟನೆಯ ರಾಜು ಖಿಚಡೆ, ಮಾತನಾಡಿ ಎಲ್ಲಿಯ ವರೆಗೆ ಕಾರ್ಖಾನೆಗಳು ನಮ್ಮ ಬೇಡಿಕೆ ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ದರ ಘೋಷಿಸುವುದಿಲ್ಲಅಲ್ಲಿಯವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಖಡಾ ಖಂಡಿತವಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಡ್ರೈವರ್, ರೈತ ಸಂಘಟನೆ ಹಾಗೂ ಜವಾಹರ ಕಾರ್ಖಾನೆ ಸಿಡಿಓ ಮಧ್ಯೆ ಕೆಲಕಾಲ ವಾದ-ವಿವಾದ ನಡೆಯಿತು. ಪ್ರತಿಭಟನೆಯಲ್ಲಿ ಜೈ ಕಿಸಾನ್ ರೈತ ಸಂಘಟನೆ ಅಧ್ಯಕ್ಷ ರಮೇಶ್ ಪಾಟೀಲ, ಸ್ವಾಭಿಮಾನಿ ರೈತ ಸಂಘಟನೆಯ ಕಾರ್ಯಕರ್ತರಾದ ಶೀತಲ ಬಾಗೆ, ಬಾಬಾಸಾಬ ಖೋತ ಪೋಪಟ ಗೇಬಿಸೇ ಪಂಕಜ ತಿಪ್ಪಣ್ಣವರ, ಸುಭಾಷ್ ಚೌಗಲೆ ಪ್ರಕಾಶ ಖೋತ, ಪ್ರಮೋದ್ ಪಾಟೀಲ್ ಸ್ವಯಂ ಪಾಟೀಲ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




