ಶಿರಸಿ : ರಾಷ್ಟ್ರಗೀತೆ ಕುರಿತು ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ. ‘ಜನಗಣಮನ ಬ್ರಿಟಿಷ್ ಅಧಿಕಾರಿ ಸ್ವಾಗತಕ್ಕಾಗಿ ರಚಿಸಿದ್ದು. ಅಸಲಿಗೆ ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕಿತ್ತು ಎಂದು ಹೇಳಿ ವಿವಾದ ಹುಟ್ಟು ಹಾಕಿದ್ದಾರೆ.
ಹೊನ್ನಾವರದಲ್ಲಿ ಮಾತಾಡಿದ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ‘ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕಿತ್ತು.
ಆದರೆ, ಜನಗಣಮನವನ್ನು ರಾಷ್ಟ್ರಗೀತೆಯನ್ನಾಗಿ ಮಾಡಿದ್ರು. ದೇಶದ ಏಕತೆ, ಒಗ್ಗೂಡುವಿಕೆಗೆ ವಂದೇ ಮಾತರಂ ಸೂಕ್ತ ಎಂದು ಹೇಳಿದ್ದಾರೆ.
ವಂದೇ ಮಾತರಂ ಗೀತೆ ರಾಷ್ಟ್ರಗೀತೆಗೆ ಸರಿಸಮನಾಗಿದೆ. ಈ ಗೀತೆಗೆ ದೇಶದಲ್ಲಿ ಪ್ರಾಮುಖ್ಯತೆ ನೀಡಬೇಕು. ಸ್ವಾತಂತ್ರ್ಯ ಹೋರಾಟಕ್ಕೆ ಇದೇ ಗೀತೆ ಪ್ರೇರಣೆ ನೀಡಿತ್ತು.
ವಂದೇ ಮಾತರಂ ಗೀತೆ ರಾಷ್ಟ್ರಗೀತೆ ಆಗಬೇಕು ಎಂಬ ಕೂಗು ಬಲವಾಗಿತ್ತು. ಪೂರ್ವಜರು ವಂದೇ ಮಾತರಂ ಜೊತೆಗೆ ಜನಗಣಮನವನ್ನು ರಾಷ್ಟ್ರಗೀತೆ ಎಂದು ಒಪ್ಪಿಕೊಂಡರು’ ಎಂದು ಕಾಗೇರಿ ಹೇಳಿದರು.
ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ ಗೀತೆ ಕೊಟ್ಟಂತ ಕೊಡುಗೆ ಅದು ನಮಗೆ ಸದಾ ಪ್ರೇರಣೆಯನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ.
ವಂದೇ ಮಾತರಂಗೇ 150 ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಂಠ, ಕಂಠಗಳಲ್ಲಿ ಗೀತೆ ಪ್ರತಿದ್ವನಿಸಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ ಹಾಡು ಕಂಠಸ್ಥವಾಗಿ ಮತ್ತೆ ಮೊಳಗಬೇಕು’ ಎಂದು ಕಾಗೇರಿ ಹೇಳಿದರು.




