ಹುಮನಾಬಾದ: ಭಕ್ತ ಕನಕದಾಸರ 538ನೇ ಜಯಂತಿಯ ಉತ್ಸವ ಸಮಿತಿ ಅಧ್ಯಕ್ಷರಾಗಿ ಸತೀಶ ರಾಂಪುರೆ ಅವರು ಸ್ವಯಂವಾಗಿ ಘೋಷಿಸಿಕೊಂಡಿದ್ದಾರೆ ಎಂದು ಗೊಂಡ ಸಮಾಜದ ಮುಖಂಡ ಶಿವರಾಜ ಚಿನಕೇರಿ ಆರೋಪ ಮಾಡಿದ್ದಾರೆ.
ಹುಮನಾಬಾದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕರೆದ ಮಾಧ್ಯಮ ಘೋಷ್ಠಿಯಲ್ಲಿ ಅವರು ಮಾತನಾಡಿ, ಜಯಂತಿ ಉತ್ಸವ ಪೂರ್ವಭಾವಿ ಸಭೆಯಲ್ಲಿ ಸತೀಶ ರಾಂಪುರೆ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿಲ್ಲ,ಆದರೆ ಅವರು ಸ್ವಯಂವಾಗಿ ಅಧ್ಯಕ್ಷ ಎಂದು ಹೇಳಿಕೊಳ್ಳುತ್ತಿರುವುದು ಡನೀಯವಾಗಿದೆ.ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಎಂದು ನಾವು ಮಾನ್ಯತೆ ಕೊಡುವುದಿಲ್ಲ.
ಹೀಗಾಗಿ ತಾಲ್ಲೂಕಿನ ಸಮಾಜ ಬಾಂಧವರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗಬಾರದು,ಈ ವರ್ಷ ತಾಲೂಕಿನಲ್ಲಿ ಎಲ್ಲರೂ ಒಂದುಗೂಡಿ ಕೇವಲ ಒಂದೇ ಜಯಂತಿ ಆಚರಣೆ ಮಾಡಲು ಪ್ರಯತ್ನ ಮಾಡೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿನಾಯಕ ದೇವದತ್ತ ಒಡೆಯರ್,ವಿನಾಯಕ ಮಣಕೊಜಿ,ಪಂಡಿತ ಹಿಪ್ಪರಗಿ,ಪವನ ಗೊಂಡ,ಪಂಡಿತ ವಡ್ಡನಕೆರಾ ಸೇರಿ ಅನೇಕರು ಉಪಸ್ಥಿತರಿದ್ದರು.




