—————————————-ಲಂಚ ಸ್ವೀಕರಿಸುವಾಗಲೇ ಸಿಕ್ಕಿ ಬಿದ್ದ ಅಧಿಕಾರಿ
ಔರಾದ್ : ಗ್ರಾಮ ಪಂಚಾಯತ್ ನಲ್ಲಿ ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಅನಿತಾ ರಾಠೋಡ್ 12 ಸಾವಿರ ಹಣದೊಂದಿಗೆ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಔರಾದ್ ತಾಲೂಕಿನ ಧೂಪತಮಾಗಾಂವ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದಿದೆ.

ಜಿರ್ಗಾ (ಬಿ) ಗ್ರಾಮದ ನಿವಾಸಿ ರಾಜಕುಮಾರ ರೇವಣಪ್ಪ ಪಾಟೀಲ್ ಎಂಬುವವರು ನಿವೇಶನವನ್ನು ಇ-ಸ್ವತ್ತು ಮಾಡಿ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಗ್ರಾಮ ಪಂಚಾಯಿತಿಗೆ ಬಂದಾಗ ಅರ್ಜಿದಾರರ ಅರ್ಜಿ ಸಲ್ಲಿಸುವಾಗ ತಮ್ಮ ಆಸ್ತಿಗೆ ಸಂಬಂಧಪಟ್ಟ ದಾಖಲೆ ನೀಡಿದ್ದರೂ ಪಿಡಿಒ ಅನಿತಾ ಇ-ಸ್ವತ್ತು ಮಾಡಿ ಕೊಟ್ಟಿರಲಿಲ್ಲ.
ಅರ್ಜಿದಾರರು ಪಿಡಿಒ ಅನೇಕ ಬಾರಿ ಮನವಿ ಮಾಡಿದರು ಇ-ಸ್ವತ್ತು ಮಾಡಿಲ್ಲ ಏಕೆ ಎಂದು ಕೇಳಿದಾಗ ಪಿಡಿಒ ಹಣಕ್ಕೆ ಒತ್ತಾಯ ಮಾಡಿದ್ದರು ಎನ್ನಲಾಗಿದೆ. ಇನ್ನೂ ಪಿಡಿಒ ಅವರು ತಮ್ಮ ಪತಿ ದಯಾನಂದ ರಾಠೋಡ್ ಅವರನ್ನು ಪಂಚಾಯತಿಯಲ್ಲಿ ದಲ್ಲಾಳಿಯಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು.
ಪತ್ನಿ ಪಿಡಿಒ ಅನಿತಾ ರಾಠೋಡ್ ಹಾಗೂ ಪತಿ ದಯಾನಂದ ರಾಠೋಡ್ ಅವರು ಅರ್ಜಿದಾರ ರಾಜಕುಮಾರ ಪಾಟೀಲ್ ಅವರಿಂದ ಹಣ ಪಡೆಯುವಾಗ ಖಚಿತ ಮಾಹಿತಿ ಪಡೆದು ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಹಣಮಂತರಾಯ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಅರ್ಜುನಪ್ಪ, ಬಾಬಾಸಾಹೇಬ, ಸಂತೋಷ ರಾಠೋಡ್, ದಂಡಪ್ಪ ಅವರು ದಾಳಿ ನಡೆಸುವಲ್ಲಿ ಯಶಸ್ವಿಯಾದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ಪಿಡಿಒ ಅನಿತಾ ಹಾಗೂ ಅವರ ಪತಿ ದಯಾನಂದ ಅವರಿಗೆ ನ್ಯಾಯಂಗ ಬಂಧನಕ್ಕೆ ಕಳುಹಿಸಲಾಗಿದೆ.
ವರದಿ: ಸೂರ್ಯಕಾಂತ್ ಎಕಲಾರ




