ಸೇಡಂ: ತಾಲೂಕಿನ ಇಟ್ಕಲ್ ಗ್ರಾಮದ ಕೆಳ ಕೆರೆ ಹರಿಜನವಾಡದಲ್ಲಿ ಊರಿನ ನಿವಾಸಿಗಳಾದ ಲಾಲಪ್ಪ ತಂದೆ ಹನುಮಂತು ಬ್ಯಾಗರಿ ಎಂಬುವವರು ಕೆರೆಯೊಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇದಕ್ಕೆ ಮುಖ್ಯ ಕಾರಣ ಕೆರೆ ಸುತ್ತ ಯಾವುದೇ ರೀತಿಯ ಕಂಚೆ, ಮತ್ತು ಕಟ್ಟಡಗಳು ಇರುವುದಿಲ್ಲ.

ಇನ್ನೂ ಮುಂದೆ ಇಂತಹ ಘಟನೆ ಮರುಕಳಿಸದಂತೆ ತಾಲೂಕ ಆಡಳಿತ ಮತ್ತು ಸಚಿವರಾದ ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ಅವರು ಜಾಗೃತಿ ಕ್ರಮ ಕೈಗೊಂಡು ಆ ಕೆರೆಯ ಸುತ್ತಮುತ್ತಲು ಕಂಚೆ ಹಾಕಿಸಬೇಕು ಎಂದು ಇಟ್ಕಲ್ ಗ್ರಾಮದ ಭಾರತೀಯ ಜನತಾ ಪಕ್ಷದ ಯುವ ಮುಖಂಡರಾದ ನರೇಶ್ ಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




