Ad imageAd image

‘ಲಿಂಗಸ್ಗೂರು ಶಾಸಕರು ಮತ ಕಳ್ಳತನದಿಂದ ಅಧಿಕಾರಕ್ಕೆ ಬಂದಿದ್ದಾರೆ’

Bharath Vaibhav
‘ಲಿಂಗಸ್ಗೂರು ಶಾಸಕರು ಮತ ಕಳ್ಳತನದಿಂದ ಅಧಿಕಾರಕ್ಕೆ ಬಂದಿದ್ದಾರೆ’
WhatsApp Group Join Now
Telegram Group Join Now

 —————ಲಿಂಗಸ್ಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ ನಾಯಕ್ ಆರೋಪ

ಲಿಂಗಸ್ಗೂರು: ಲಿಂಗಸೂಗೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೊಡಲಬಂಡಾ (ತ) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಯಲಗಟ್ಟಾ ಗ್ರಾಮದಲ್ಲಿ ಮುಖಂಡರು ಸಭೆ ನಡೆಸಿ ಸಹಿ ಸಂಗ್ರಹ ಅಭಿಯಾನಕ್ಕೆ ‌ಚಾಲನೆ ನೀಡಲಾಯಿತು.

ಲಿಂಗಸೂಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷರಾದ ಗೋವಿಂದ ನಾಯಕ ನೇತೃತ್ವದಲ್ಲಿ “ವೋಟ್ ಚೋರ್ ಗದ್ದಿ ಚೋಡ್” (ಮತಗಳ್ಳರೇ ಕುರ್ಚಿ ಖಾಲಿ ಮಾಡಿ) ಅಭಿಯಾನದಡಿ ಭೂತ್ ಮಟ್ಟದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ಪ್ರತಿ ಭೂತ್ ಮಟ್ಟದಲ್ಲಿ ಮನೆಮನೆಗೆ ತೆರಳಿ ಮತಗಳ್ಳತನ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಸಹಿ ಸಂಗ್ರಹ ನಡೆಸಲಾಗುತ್ತಿದೆ. ಬಿಜೆಪಿ ಚುನಾವಣಾ ಆಯೋಗವನ್ನು ದುರುಪಯೋಗ ನಡೆಸಿಕೊಂಡು ಮತದಾರರ ಪಟ್ಟಿಯನ್ನು ತಿರಚಿ ಕಳ್ಳಮಾರ್ಗದಿಂದ ಅಧಿಕಾರಕ್ಕೆ ಬರಲು ಕೆಲಸ ಮಾಡಿದೆ ಮತದಾರರ ಜಾಗೃತರಾಗಬೇಕಾಗಿದೆ,”ನಮ್ಮ ಮತ ನಮ್ಮ ಹಕ್ಕು” ಇದರ ದುರುಪಯೋಗ ತಡೆಗಟ್ಟಲು ನಾವೆಲ್ಲರೂ ಜಾಗೃತಿಯನ್ನು ಮೂಡಿಸಲು ಅನಿವಾರ್ಯ ಇದೆ.

ಬಿಜೆಪಿ ಶಾಸಕರಾದ ಮಾನಪ್ಪ ಡಿ ವಜ್ಜಲ್ ಕಳ್ಳ ಮತದಾನದಿಂದ ಅಧಿಕಾರಕ್ಕೆ ಬಂದಿದ್ದಾರೆ ಕಳ್ಳ ಮತದಾನ ನಡೆಯದಿದ್ದರೆ ಮಾಜಿ ಶಾಸಕರಾದ ಡಿ ಎಸ್ ಹುಲಿಗೇರಿ ಗೆಲ್ಲು ನಿಶ್ಚಿತ ಎಂದು, ಲಿಂಗಸ್ಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಗೋವಿಂದ್ ನಾಯಕ್ ಹೇಳಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಶಿವಣ್ಣ ನಾಯಕ ಕೋಠಾ,
ಹಟ್ಟಿ ಕಾಂಗ್ರೆಸ್ ಸಮಿತಿ ನಗರ ಘಟಕ ಅದ್ಯಕ್ಷರಾದ ಅಹ್ಮದ್ ಬಾಬಾ,ಲಿಂಗಸೂಗೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅದ್ಯಕ್ಷರಾದ  ಮಹ್ಮದ್ ರಫಿ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಅಮ್ಜದ್ ಸೇಟ್
ಲಿಂಗಸೂಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗ ಅದ್ಯಕ್ಷರಾದ ಉಮೇಶ ಹುನ್ನಕುಂಟಿ,
ಲಿಂಗಸೂಗೂರು ಬ್ಲಾಕ್ ಕಾಂಗ್ರೇಸ್ ಸಮಿತಿ ಉಪಾಧ್ಯಕ್ಷರಾದ ವಿಶ್ವಕ್ರಾಂತಿ, ತಾಲ್ಲೂಕು ಪಂಚಾಯತ ಕೆಡಿಪಿ ಸದಸ್ಯರಾದ ಶರಣಪ್ಪ ಕಟಗಿ, ಭೂ ನ್ಯಾಯ ಮಂಡಳಿ ನಾಮನಿರ್ದೇಶನ ಸದಸ್ಯರಾದ ಶಂಶುದ್ದಿನ್ ವಕೀಲರು,
ಪಟ್ಟಣ ಪಂಚಾಯತ್ ಸದಸ್ಯರಾದ ಸಿರಾಜುದ್ದೀನ್ ಖುರೇಷಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ದೇವೇಂದ್ರಪ್ಪ ಹಟ್ಟಿ ಇನ್ನಿತರ ಮುಖಂಡರು ಉಪಸ್ಥಿತಿ ಇದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!