ರಾಮದುರ್ಗ: ತಾಲೂಕಿನ ಕಾರ್ಮಿಕ ನಿರೀಕ್ಷಕರಾದ ನಾಗರಾಜ್ ಮದೂರ ವಿರುದ್ಧ ಕರ್ನಾಟಕ ರಾಜ್ಯ ಇಂದಿರಾ ಗಾಂಧಿ ಕಟ್ಟಡ ಕಾರ್ಮಿಕರ ಸಂಘ ರಾಮದುರ್ಗ ಅಧ್ಯಕ್ಷರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ರಾಮದುರ್ಗ ತಾಲೂಕ ಉಪಾಧ್ಯಕ್ಷರಾದ ಗಣೇಶ್ ವಾಯ್ ದೊಡ್ಡಮನಿ ಸರಕಾರಕ್ಕೆ ವಂಚನೆ ಮತ್ತು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
ರಾಮದುರ್ಗ ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಅರ್ಜಿಗಳಾದ ಮದುವೆ ಹೆರಿಗೆ ಮರಣ ವೈದ್ಯಕೀಯ ವೆಚ್ಚ ಇನ್ನೂ ಇತರೆ ಸೌಲಭ್ಯಗಳ ಅರ್ಜಿಗಳನ್ನು ಸ್ಥಳ ಪರಿಶೀಲನೆ ಮಾಡದೆ ತಿರಸ್ಕಾರ ಮಾಡುತ್ತಿರುತ್ತಾರೆ. ಹಣ ನೀಡಿದವರ ಅರ್ಜಿಗಳನ್ನು ಮಾತ್ರ ಮಂಜೂರು ಮಾಡುತ್ತಾರೆ ಇವರು ಪ್ರೊಬೆಷನರಿ ಫೀಲ್ಡ್ ನಲ್ಲಿ ಇದ್ದರು ಸಹಿತ ಹಣ ವಸೂಲಿಗೆ ನಿಂತಿದ್ದಾರೆ.

ಒಂದು ವೇಳೆ ಇವರು ಕಾಯಂ ಆದರೆ ಮುಂದಿನ ಪರಿಸ್ಥಿತಿ ಹೇಗೆ ಹಾಗೂ ಶಾಪ್ ಲೈಸೆನ್ಸ್ ಗಳನ್ನು ನೀಡಲು ಪ್ರತಿ ಅಂಗಡಿಗೆ 5000 ರೂಗಳನ್ನು ವಸೂಲಿ ಮಾಡುತ್ತಿದ್ದಾರೆ ತಮ್ಮವರೇ ಆದ ಏಜೆಂಟ್ಗಳನ್ನು ಹುಟ್ಟುಹಾಕಿ ಅವರಿಂದ ಅರ್ಜಿಗಳ ಪರಿಶೀಲನೆ ಮಾಡಿಸಿ ಹಣ ವಸೂಲಿ ಮಾಡಲು ಕಳುಹಿಸುತ್ತಾರೆ ಇವರಿಗೆ ಯಾವುದೇ ಮೆಲಾಧಿಕಾರಿಗಳ ಭಯವಿಲ್ಲದೆ ಹಣ ವಸೂಲಿ ಮಾಡುತ್ತಿರುತ್ತಾರೆ.
ಅಸಂಘಟಿತ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲು ಆನ್ ಲೈನ್ ಅಂಗಡಿಗಳಿಗೆ ಕಾಡುಗಳನ್ನು ನೀಡಿ ಪ್ರತೀ ಕಾರ್ಡ ಗೆ ಒಂದು ನೂರು ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಹಾಗೂ ಕಾರ್ಮಿಕರಿಗೆ ಬಂದಿರುವಂತಹ ಕಿಟ್ಟುಗಳನ್ನು ವಿತರಿಸದೆ ಹಾಗೂ ಯಾರ ಗಮನಕ್ಕೂ ತರದೇ ಖಾಸಗಿಯಾಗಿ ಹಣಕ್ಕೆ ಮಾರಿಕೊಳ್ಳುತ್ತಿರುವುದು ಜನರು ವ್ಯಕ್ತಪಡಿಸಿರುವ ಕಾರಣ ಇವರ ಮೇಲೆ ಕರ್ನಾಟಕ ರಾಜ್ಯ ಇಂದಿರಾ ಗಾಂಧಿ ಕಟ್ಟಡ ಕಾರ್ಮಿಕರ ಸಂಘ ರಾಮದುರ್ಗ ಅಧ್ಯಕ್ಷರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ರಾಮದುರ್ಗ ತಾಲೂಕ ಉಪಾಧ್ಯಕ್ಷರಾದ ಗಣೇಶ್ ವಾಯ್ ದೊಡ್ಡಮನಿ ಇವರು ಮೇಲಾಧಿಕಾರಿಗಳಾದ ಎಲ್ ಓ, ಎ ಎಲ್ ಸಿ, ಮತ್ತು ಡಿ ಎಲ್ ಸಿ ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ ಅವರಿಗೆ ದೂರು ನೀಡಿದ ಕಾರಣ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷರಾದ ವಿಜಯಕುಮಾರ್ ರಾಥೋಡ್ ಇವರ ನೇತೃತ್ವದಲ್ಲಿ ಇಂದು ರಾಮದುರ್ಗಕ್ಕೆ ಆಗಮಿಸಿರುವ ಜಿಲ್ಲಾ ಕಚೇರಿಯ ಕಾರ್ಮಿಕ ಅಧಿಕಾರಿಯಾದ ರಾಜೇಶ್ ಜಾದವ್ ಸರ್ ಇವರಿಗೆ ನಮ್ಮ ತಾಲೂಕಿನಲ್ಲಿರುವ ಕಾರ್ಮಿಕ ನಿರೀಕ್ಷಕರನ್ನು ಇಲ್ಲಿಂದ ವರ್ಗಾವಣೆ ಮಾಡಿ ರಾಮದುರ್ಗಕ್ಕೆ ಬೇರೊಬ್ಬ ಅನುಭವ ಇರುವ ಕಾರ್ಮಿಕ ನಿರೀಕ್ಷಕರನ್ನು ನೇಮಿಸಲು ಒತ್ತಾಯ ಮಾಡಲಾಯಿತು.
ಒಂದು ವೇಳೆ ವರ್ಗಾವಣೆ ಮಾಡದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು . ಹಾಗೆಯೇ ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನ ನೂತನ ಸದಸ್ಯರಾದ ಶ್ರೀ ಮಲ್ಲಣ್ಣ ಯಾದವಾಡ ಇವರು ಸಹಿತ ಕಾರ್ಮಿಕರ ಹಿತ ದೃಷ್ಟಿಯಿಂದ ಕಾರ್ಮಿಕ ಅಧಿಕಾರಿಗಳಿಗೆ ರಾಮದುರ್ಗ ಕಾರ್ಮಿಕ ನಿರೀಕ್ಷಕರಾದ ನಾಗರಾಜ ಅವರನ್ನು ಸರಿಯಾಗಿ ತರಾಟಿಗೆ ತೆಗೆದುಕೊಂಡುರು.
ನಂತರ ಕಾರ್ಮಿಕರ ಕೀಟ್ಟಗಳನ್ನು ಯಾರಿಗೂ ಹೇಳದೆ ತಿಳಿಸದೆ ಬಚ್ಚಿಟ್ಟಿರುವ ಕಾರ್ಮಿಕರ ಕಿಟ್ಟಗಳನ್ನು ಮೇಲಾಧಿಕಾರಿಗಳನ್ನು ಕರೆದುಕೊಂಡು ಬಚ್ಚಿಟ್ಟಿರುವ ಕಾರ್ಮಿಕರ ಕಿಟ್ಟಗಳನ್ನು ಗಣೇಶ ದೊಡ್ಡಮನಿ ತೋರಿಸಿದರು. ರಕ್ಷಣಾ ವೇದಿಕೆ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ವರದಿ: ಮಂಜುನಾಥ ಕಲಾದಗಿ




