——————————ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿ
ಮೊಂಗ್ ಕಾಂಗ್: ಭಾರತ ಸೂಪರ್ ಸಿಕ್ಸ್ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ ಸೂಪರ್ ಸಿಕ್ಸಸ್ ಕ್ರಿಕೆಟ್ ಪಂದ್ಯಾವಳಿಯ ಸಿ’ ಗುಂಪಿನ ಪಂದ್ಯದಲ್ಲಿ 2 ರನ್ ಗಳಿಂದ ಗೆಲುವು ಪಡೆದಿದೆ.
ಇಲ್ಲಿನ ಮಿಷನ್ ರೋಡ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡವು ನಿಗದಿತ 6 ಓವರುಗಳಲ್ಲಿ 4 ವಿಕೆಟ್ ಗೆ 86 ರನ್ ಗಳಿಸಿತು. ಪ್ರತಿಯಾಗಿ ಆಡಿದ ಪಾಕಿಸ್ತಾನ ತಂಡ 3 ಓವರುಗಳಲ್ಲಿ 1 ವಿಕೆಟ್ ಗೆ 41 ರನ್ ಗಳಿಸಿದ್ದಾಗ ಪಂದ್ಯ ಮಳೆಯಿಂದ ಸ್ಥಗಿತಗೊಂಡು ಪಂದ್ಯ ಮತ್ತೇ ಆರಂಭವಾಗದ ಕಾರಣ ಡೆಕವರ್ತ್ ಲೂಯಿಸ್ ನಿಯಮದಂತೆ 2 ರನ್ ಗಳಿಂದ ಗೆದ್ದುಕೊಂಡಿತು.
ಸ್ಕೋರ್ ವಿವರ
ಭಾರತ 6 ಓವರುಗಳಲ್ಲಿ 4 ವಿಕೆಟ್ ಗೆ 86
ರಾಬಿನ್ ಉತ್ತಪ್ಪ 28 ( 11 ಎಸೆತ, 2 ಬೌಂಡರಿ 3 ಸಿಕ್ಸರ್
ಚಿಪ್ಲಿ 24 ( 13 ಎಸೆತ, 2 ಬೌಂಡರಿ, 2 ಸಿಕ್ಸರ್)
ದಿನೇಶ್ ಕಾರ್ತಿಕ್ 17 ( 6 ಎಸೆತ, 2 ಬೌಂಡರಿ, 1 ಸಿಕ್ಸರ್
ಮೊಹ್ಮದ್ ಶಹಜಾದ್ 15 ಕ್ಕೆ 2
ಪಾಕಿಸ್ತಾನ 3 ಓವರುಗಳಲ್ಲಿ 1 ವಿಕೆಟ್ ಗೆ 41
ಖವಾಜ್ ನಫಾಯಾ ( ಅಜೇಯ 18 ( 9 ಎಸೆತ, 1 ಬೌಂಡರಿ, 2 ಸಿಕ್ಸರ್)
ಅಬ್ದುಲ್ ಸಾಮದ್ ಅಜೇಯ 16 ( 6 ಎಸೆತ, 2 ಬೌಂಡರಿ, 1 ಸಿಕ್ಸರ್)




