ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದಾಂಡೇಲಿ ಉಪ ವಿಭಾಗದ ಅರಣ್ಯ ಪ್ರದೇಶದ ವ್ಯಾಪ್ತಿಯ ರಸ್ತೆಯಲ್ಲಿ ಇಕ್ಕೆಲಗಳಲ್ಲಿ ಟನ್ ಗಟ್ಟಲೇ ಕಸದ ರಾಶಿಗಳು ದಿನೇ ದಿನೇ ಹೆಚ್ಚಾಗುತ್ತಿದೆ.

ಇನ್ನೊಂದು ಕಡೆ ವಿರ್ಣೋಲಿ ವಲಯ ಅರಣ್ಯ ಕಚೇರಿಯ ಹತ್ತಿರದ ದಾಂಡೇಲಿಗೆ ಬರುವ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿಗಳು ಹಾಗೂ ರಾಸಾಯನಿಕ ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಿದ್ದರೂ ದಿನ ನಿತ್ಯ ಇದೇ ರಸ್ತೆಯಲ್ಲೇ, ಈ ಕಸದ ರಾಶಿಗಳನ್ನು ನೋಡಿಕೊಂಡೇ ಅಡ್ಡಾಡುವ ದಾಂಡೇಲಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಹಾಗೂ ವಲಯ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ನೋಡಿದ್ರೆ ಇವರೇ ಈ ಪ್ರದೇಶದಲ್ಲಿ ಕಸದ ರಾಶಿ ಹಾಗೂ ತ್ಯಾಜ್ಯ ಸುರಿಯುವುದಕ್ಕೆ ಎಡೆಮಾಡಿಕೊಟ್ಟರೇ ಎಂಬ ಸಂಶಯ ಕಾಡುತ್ತಿದೆ.
ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಅರಣ್ಯ ಇಲಾಖೆ ಸಚಿವ ಆಪ್ತ ಸಹಾಯಕ ಹಾಗೂ ಹಳಿಯಾಳ ಉಪ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಆಸ ಡಾ. ಪ್ರಶಾಂತ್ ಕುಮಾರ್ ಅವರಿಗೆ ಕರೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ದಾಂಡೇಲಿಗೆ ಹೋಗುವ ಅರಣ್ಯ ಪ್ರದೇಶದ ವ್ಯಾಪ್ತಿಯ ರಸ್ತೆಯ ಇಕ್ಕೆಲಗಳಲ್ಲಿರುವ ಕಸದ ರಾಶಿಗಳು ಹಾಗೂ ತ್ಯಾಜ್ಯವಸ್ತುಗಳಿಗೆ ಮುಕ್ತಿ ಕೊಟ್ಟು ಇದನ್ನು ತಪ್ಪಿಸುವರೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಬಸವರಾಜು




