Ad imageAd image

ನ. 10 ರಂದು ಅದ್ದೂರಿ ಕನಕದಾಸರ ಜಯಂತಿ

Bharath Vaibhav
ನ. 10 ರಂದು ಅದ್ದೂರಿ ಕನಕದಾಸರ ಜಯಂತಿ
WhatsApp Group Join Now
Telegram Group Join Now

ಯರಗಟ್ಟಿ: ನ. 10 ಸೋಮವಾರದ ದಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಭಕ್ತ ಕನಕದಾಸ ಜಯಂತ್ಯೋತ್ಸವ ಸಮೀತಿಯಿಂದ 538ನೇ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಶಂಕರ ಇಟ್ನಾಳ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಸೋಮವಾರ ಬೆಳಗ್ಗೆ 10-00 ಗಂಟೆಗೆ ಭಕ್ತ ಕನಕದಾಸಲ ಮೂರ್ತಿ ಭವ್ಯ ಮೆರವಣಿಗೆಯು ಡೋಳ್ಳು ಕುಣಿತ, ಗೊಂಬೆ ಕುಣಿತ, ಕರಡಿ ಮಜಲು, ಹಾಗೂ ಡೊಳ್ಳಿನ ವಾಲಗದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿಸು ಹಾಗೂ ಸಂಜೆ 05-00 ಗಂಟೆಗೆ ಸಂಗೀತ ಸಂಜೆ ಕಾರ್ಯಕ್ರಮ ಜರುಗುವುದು ಎಂದು ಹೇಳಿದರು.

ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಸವದತ್ತಿ ಬ್ರಹ್ಮಾನಂದ ಆಶ್ರಮದ ಶಿವಾನಂದ ಮಹಾಸ್ವಾಮಿಗಳ, ರಾಜರಾಜೇಶ್ವರಿ ಆಶ್ರಯದ ಗಣಪತಿ ಮಹಾರಾಜರು, ಮುಗಳಿಹಾಳದ ದೇವರಿಷಿ ಲಕ್ಷ್ಮಣ ಅಜ್ಜನವರು, ಬಿಡಕಿ ಶಿವಾನಂದ ಮಠದ ಗಂಗಾಧರ ಮಹಾಸ್ವಾಮಿಗಳು, ಉದ್ಘಾಟಕರಾಗಿ ಶಾಸಕ ವಿಶ್ವಾಸ ವೈದ್ಯ, ಜ್ಯೋತಿ ಬೆಳಗಿಸುವವರು ಕುರುಬ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ, ಕೆಎಂಎಫ್ ನಿರ್ದೇಶಕ ಅಜೀತಕುಮಾರ ದೇಸಾಯಿ, ಕುರುಬ ಸಂಘದ ಮಡ್ಡೆಪ್ಪ ತೊಳನವರ, ಮಾಜಿ ಪ್ರಧಾನರಾದ ನಿಖಿಲ ದೇಸಾಯಿ, ಕುರುಬ ಸಂಘದ ಕಾರ್ಯದರ್ಶಿಯಾದ ಬಸವರಾಜ ಬಸಲಿಗುಂದಿ, ಅತಿಥಿ ಉಪನ್ಯಾಸಕರಾಗಿ ಬಾ. ವಾಯ್. ಎಮ್. ಯಾಕೋಳ್ಳಿ ಮುಖ್ಯ ಅತಿಥಿಗಳಾಗಿ ಡಿ ಡಿ ಟೋಪೋಜಿ, ಜಿ ಜಿ ಕಣವಿ, ಎಸ್. ಎಫ್. ಕಣವಿ, ಪಂಚಪ್ಪ ಮಲ್ಲಾಡ, ಮಲ್ಲಿಕಸಾಬ ಬಾಗವಾನ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಪ್ರಕಾಶ ವಾಲಿ ವಿಠ್ಠಲ ಬಂಟನೂರ ಸೇರಿದಂತೆ ಅನೇಕ ಗಣ್ಯರು ಆಗಮಿಸಲ್ಲಿದ್ದಾರೆ ಎಂದು ತಿಳಿಸಿದರು.

ವರದಿ: ಈರಣ್ಣಾ ಹೂಲ್ಲೂರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!