——————————————————–ಸೂಕ್ತ ಕ್ರಮಕ್ಕೆ ರೈತ ಸಂಘ ಆಗ್ರಹ
ಸೇಡಂ: ತಾಲೂಕಿನ ಕೊಂಪಲ್ಲಿ ಅರಣ್ಯದಲ್ಲಿ ಚಿರತೆ ದಾಳಿಗೆ ಮತ್ತೊಂದು ಹಸುವು ಬಲಿಯಾಗಿದೆ.
ಕೆಲ ದಿನಗಳ ಹಿಂದೆ ಪಾಖಲಾ ಗ್ರಾಮದ ರೈತರಾದ ಅಂಬರೀಶ್ ಅವರ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ತಿನ್ನಿತ್ತು. ಇದೀಗ ಚಂದಾಪುರ ಗ್ರಾಮದ ಮಾಣಿಕಪ್ಪ ಎಂಬುವವರ ಹಸುವಿನ ಮೇಲೆ ಶುಕ್ರವಾರ ರಾತ್ರಿ ಚಿರತೆ ದಾಳಿ ಮಾಡಿ ಮತ್ತೊಂದು ಹಸುವನ್ನು ತಿಂದಿರುವ ಘಟನೆ ನಡೆದಿದೆ.

ಮೊದಲಿನ ದೂರಿನ ಪ್ರಕಾರ ಅರಣ್ಯಾಧಿಕಾರಿಗಳು ವಿಜಯ್ ಕುಮಾರ್ ಅವರ ನೇತೃತ್ವದಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಬಾಕ್ಸ್ ಹಚ್ಚಿದರು. ಆದರೆ ಅದು ಈಗ ಜಾಗ ಬದಲಾವಣೆ ಮಾಡಿ ಬೇರೊಬ್ಬ ರೈತನ ಹಸುವನ್ನು ತಿಂದು ರೈತರಿಗೆ ಕೂಲಿಕಾರ್ಮಿಕರಿಗೆ ಆತಂಕ ಸೃಷ್ಟಿಸಿದೆ ಕೂಡಲೇ ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡು ಚಿರತೆಯನ್ನು ಸೆರೆಹಿಡಿಯುವ ಕೆಲಸ ಮಾಡಬೇಕು ಮತ್ತು ನೊಂದ ರೈತರಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷರಾದ ಅನಿಲ್ ಪೊಟೇಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪಶುವೈದರಾದ ರೋಹಿತ್ ಅವರು ಮಾತನಾಡಿ ಹಸುವಿನ ಪಂಚನಾಮ ಮಾಡಲಾಗಿದೆ ಅದರ ರಿಪೋರ್ಟ್ ಗಳನ್ನು ಮುಂದಿನ ಪರಿಶೀಲನೆಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಚಿರತೆಯನ್ನು ಸೆರೆಹಿಡಿಯಲು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಅದಷ್ಟು ಪ್ರಯತ್ನ ಮಾಡಿ ರೈತರಿಗೆ ಅಪಾಯ ಉಂಟಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ರೈತರು ಯಾರು ಕೂಡ ಒಂಟಿಯಾಗಿ ಹೋಗಬೇಡಿ, ಕೈಯಲ್ಲಿ ಲಾಠಿ, ಮತ್ತು ಇಬ್ಬರಿಗಿಂತ ಹೆಚ್ಚು ಜನ ತಿರುಗಾಡಿ, ರೈತರಜೊತೆ ನಾವು ಸದಾ ಸಹಕರಿಸುತ್ತವೆ ಎಂದು ಅರಣ್ಯಾಧಿಕಾರಿಗಳಾದ ವಿಜಯ್ ಕುಮಾರ್ ಅವರು ವ್ಯಕ್ತಪಡಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




