ಅಮೆರಿಕಾದ ಖ್ಯಾತ ಕಲಾವಿದ ಮೌರಿಜಿಯೊ ಕ್ಯಾಟೆಲನ್ ಡಿಸೈನ್ ಮಾಡಿರುವ ವಿಶ್ವದ ಅತ್ಯಂತ ದುಬಾರಿ ಕಾಮೊಡ್ (Toilet) ಈಗ ಹರಾಜಿಗೆ ಸಜ್ಜಾಗಿದೆ. ಇದನ್ನು 101 ಕಿಲೋ ಘನ ಚಿನ್ನದಿಂದ ನಿರ್ಮಿಸಲಾಗಿದೆ.
ವಿಶ್ವದ ಅತ್ಯಂತ ದುಬಾರಿ ಶೌಚಾಲಯ ಎಂದೇ ಪ್ರಸಿದ್ಧಿಯಾಗಿರುವ ಈ ಚಿನ್ನದ ಶೌಚಾಲಯವನ್ನು ಸೋಥೆಬೀಸ್‌ನಲ್ಲಿ ಬರೋಬ್ಬರಿ 83 ಕೋಟಿ ರೂಪಾಯಿ ಮೂಲ ಬೆಲೆಗೆ ಹರಾಜು ಮಾಡಲಾಗುತ್ತದೆ.
ಅಮೆರಿಕಾದಲ್ಲಿರುವ ಈ ಚಿನ್ನದ ಕಾಮೊಡ್ ಸುಮಾರು 101ಕೆಜಿಯಷ್ಟು ತೂಕವಿದ್ದು, 18 ಕ್ಯಾರೆಟ್ ಗಟ್ಟಿ ಚಿನ್ನದಿಂದ ನಿರ್ಮಿಸಲಾಗಿದೆ. ಇದು ಸಾಮಾನ್ಯ ಕಾಮೊಡ್ ನಂತೆ ಕಾರ್ಯನಿರ್ವಹಿಸುತ್ತಿದ್ದು, ಇದೆ ನವೆಂಬರ್ 18 ರಂದು ನ್ಯೂಯಾರ್ಕ್ ಸೋಥೆಬೀಸ್‌ಯು ಈ ಹರಾಜನ್ನು ನಡೆಸಲಿದೆ. ಇದರ ಆರಂಭಿಕ ಬೆಲೆಯೇ 83 ಕೋಟಿ ಎಂದು ಹೇಳಲಾಗಿದೆ.
ಕ್ಯಾಟೆಲನ್ ಅವರು 2016ರಲ್ಲಿ ಇದೇ ರೀತಿಯ ಎರಡು ಬಂಗಾರದ ಶೌಚಾಲಯಗಳನ್ನು ನಿರ್ಮಿಸಿದ್ದರು. ಅವುಗಳಲ್ಲಿ ಒಂದನ್ನು 2019ರಲ್ಲಿ ಇಂಗ್ಲೆಂಡ್‌ನ ಬೈನ್‌ಹೈಮ್ ಅರಮನೆಯಲ್ಲಿ ಪ್ರದರ್ಶನಕ್ಕಾಗಿ ಇರಿಸಲಾಯಿತು.




