—————————————-ಬೇಡಕಿಹಾಳದ ವೆಂಕಟೇಶ್ವರ ಸಕ್ಕರೆ ಕಾರ್ಖಾನೆಯ ಘೋಷಣೆ
ನಿಪ್ಪಾಣಿ: ಕಳೆದ 9 ದಿನಗಳಿಂದ ರೈತರ ಕಬ್ಬಿಗೆ ನ್ಯಾಯ ಸಮ್ಮತ ಬೆಲೆ ಪ್ರತಿಟನ್ ಕಬ್ಬಿಗೆ 3500 ರೂಪಾಯಿ ನೀಡಬೇಕೆಂದು ರೈತ ಪರ ಸಂಘಟನೆಗಳು ಹೋರಾಟ ನಡೆಸಿದರು. ಕೊನೆಗೆ ಸರಕಾರ ರೈತರಿಗೆ ಪ್ರತಿ ಟನ್ ಗೆ 50 ರೂಪಾಯಿ ಹಾಗೂ ಕಾರ್ಖಾನೆಗಳಿಂದ 3250 ರೂಪಾಯಿ ಸೇರಿ 3300 ರೂಪಾಯಿ ದರ ನಿಗದಿ ಪಡಿಸಿತು. ಆದರೆ ಸರಕಾರ ನಿಗದಿಪಡಿಸಿದ ಬೆಲೇಗಿಂತಲೂ ರೈತರಿಗೆ ಹೆಚ್ಚಿನ ಬೆಲೆ ನೀಡಲು ಸಾಧ್ಯ ಎಂಬುದನ್ನು ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಸಾಬೀತುಪಡಿಸಿದೆ.

ರೈತರ ಹಿತ ದೃಷ್ಟಿಯಿಂದ ಸನ್ 2025 =26 ನೇ ಕಬ್ಬು ನುರಿಸುವ ಹಂಗಾಮಿಗೆ ಕಾರ್ಖಾನೆ ಮಾಲೀಕರಾದ ಸ್ವರೂಪ ಮಹಾದೇವರಾವ್ ಮಹಾಡಿಕ ಹಾಗೂ ವ್ಯವಸ್ಥಾಪಕರು ಸೇರಿ ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್ ಗೆ 3350 ರೂಪಾಯಿ ದರ ಘೋಷಣೆ ಮಾಡಿ ರಾಜ್ಯದಲ್ಲಿಯ ಸಕ್ಕರೆ ಕಾರ್ಖಾನೆಗಳಿಗೆ ಮಾದರಿಯಾಗಿದೆ.
ಸರ್ಕಾರ ನೀಡುವ 50 ರುಪಾಯಿ ದರ ಘೋಷಣೆ ಮಾಡಿ ರಾಜ್ಯದಲ್ಲಿಯ ಸಕ್ಕರೆ ಕಾರ್ಖಾನೆಗಳಿಗೆ ಮಾದರಿಯಾಗಿದೆ. ಅಷ್ಟೇ ಅಲ್ಲ ರೈತರ ಹಿತಕಾಪಾಡಿದೆ. ಪ್ರಸಕ್ತ ವರ್ಷದ ಕಬ್ಬುನುರಿಸುವ ಹಂಗಾಮಿಗೆ ಕಬ್ಬು ಪೂರೈಸುವ ರೈತರ ಖಾತೆಗೆ ಪ್ರತಿಟನ್ 3300ರೂಪಾಯಿ ಜಮಾ ಮಾಡಲಿದ್ದು ಸರ್ಕಾರ ನೀಡುವ 50ರೂಪಾಯಿ ಹೀಗೆ 3350 ರೂಪಾಯಿ ಜಮಾ ಮಾಡಲಿದ್ದು ಸರ್ಕಾರದಿಂದ ರೂ.50 ಹೀಗೆ 3350 ರೂಪಾಯಿ ಜಮಾ ಮಾಡಲಿದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ಮಂಡಳಿ ರೈತರಿಗೆ ಗುಡ್ ನ್ಯೂಸ್ ನೀಡಿದೆ.
ವರದಿ: ಮಹಾವೀರ ಚಿಂಚಣೆ




