Ad imageAd image

ಗೋಕಾಕದಲ್ಲಿ ಹಾಪ್ ಮಾರಾಥೊನ್, ಯದುವೀರ ಒಡೆಯರ ಚಾಲನೆ

Bharath Vaibhav
ಗೋಕಾಕದಲ್ಲಿ ಹಾಪ್ ಮಾರಾಥೊನ್, ಯದುವೀರ ಒಡೆಯರ ಚಾಲನೆ
WhatsApp Group Join Now
Telegram Group Join Now

ಭಾರತದಲ್ಲಿ ಆರೋಗ್ಯಕರ ಸಮಾಜ ಸೃಷ್ಟಿ ಮಾಡಲು ಮುಂದಾಗಬೇಕಿದೆ ಎಂದು ಗೋಕಾಕ ನಗರ ಜೆ.ಎಸ್,ಎಸ್, ಕಾಲೇಜ ಮೈದಾನದಲ್ಲಿ ರೊಟರಿ ಕ್ಲಬ್ ಗೋಕಾಕ ಇವರ ಸಹಯೊಗದಲ್ಲಿ
ನಡೆದ ಗೋಕಾಕ ಹಾಪ್ ಮ್ಯಾರಾಥೋನ್ 2025 ಕ್ಕೆ ಆಗಮಿಸಿದ ಮೈಸೂರು ಲೊಕಸಭಾ ಸದಸ್ಯ, ಯದುವೀರ ಒಡೆಯರ ಇವರು ಹೇಳಿದರು.

ನವೆಂಬರ ತಿಂಗಳ ಅಂದರೆ ನಮ್ಮ ರಾಜ್ಯೋತ್ಸವ ಇದ್ದಂತೆ ಅದನ್ನು ನಾವು ಆಚರಿಸುವದರ ಜೊತೆಯಲ್ಲಿ ಕನ್ನಡವನ್ನು ರಕ್ಷಿಸಿಬೇಕೆಂದರು, ಅದರ ಜೊತೆಯಲ್ಲಿ ಮೈಸೂರು ಕೊಡಗಿನಂತೆ ಗೋಕಾಕ ನಗರದ ಬೆಟ್ಟ, ಗುಡ್ಡಗಳ ಸುಂದರತೆ ಕಾಣುತ್ತಲಿದೆ,

1956 ರಲ್ಲಿ ಗೋಕಾಕಕ್ಕೆ ತಾತ ಜಯಚಾಮರಾಜ ಒಡೆಯರ ಅವರು ಬಂದಿದ್ದನ್ನು ನೆನಪಿಸುವದರ ಜೊತೆಯಲ್ಲಿ ಇಲ್ಲಿನ ಪ್ರವಾಸ ನಮಗೆ ತೃಪ್ಪಿ ಸಿಕ್ಕಿಲ್ಲ , ಸುಂದರತೆ ನೋಡಲು ಮತ್ತೆ ಬರ್ತೀನಿ ಎಂದು ಆಯೋಜಕರಿಗೆ ಅಬಿನಂದನೆ ಸಲ್ಲಿಸಿ ವಿಜೆಯರಿಗೆ ಬಹುಮಾನ ವಿತರಿಸಿದರು.

ಅದರ ಜೊತೆಯಲ್ಲಿ ನಸುಕಿನ ಜಾವ ಮಾರಾಥೊನಗೆ ಚಾಲನೆ ನೀಡಿ ತಾವು ಕೂಡ 10 ಕಿಲೋ ಮಿಟರ ಒಟ ಒಡಿ ಯುವ ಜನತೆಗೆ ಹುರುದುಂಬಿಸಿದರು. ನಂತರ ಮಹಿಳಾ ಮತ್ತು ಪುರುಷ ವಿಜೇತರಿಗೆ ಯದುವೀರ ಒಡೆಯರ ಮತ್ತು ಸ್ವಾಮಿಜಿಗಳಿಂದ ಬಹುಮಾನ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಬಾಗಿಯಾದ ಪ್ರತಿ ಸ್ಪರ್ದಾಳುಗಳಿಗೆ ಮೆಡಲ್ ನೀಡಿದರು,ಈ ಮ್ಯಾರಥಾನನಲ್ಲಿ ವಯಸ್ಸನ್ನು ಲೆಕ್ಕಿಸದೆ ಚಿಕ್ಕಮಕ್ಕಳು ,ವೃದ್ದರು ,ಮಹಿಳೆಯರು ಬಾಗಿದ್ದರು,ಎಲ್ಲರಿಗೂ ಅಲ್ಪೊಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ, ವಿದಾನ ಪರಿಷತ್ ಸದಸ್ಯ ಮುರಗೇಶ ನಿರಾನಿ,ಘೋಡಗೇರಿ ಮಠದ ಶ್ರೀಗಳು, ಮರಡಿಮಠದ ಶ್ರೀಗಳು ಹಾಗೂ ಗೋಕಾಕ ರೊಟರಿ ಕ್ಲಬನ ಸರ್ವ ಸದಸ್ಯರುಗಳು ಉಪಸ್ಥಿತರಿದ್ದು ಸ್ಪರ್ದಾಳುಗಳಿಗೆ ಯಾವುದೆ ತೊಂದರೆ ಆಗದಂತೆ ಪೋಲಿಸ್ ಇಲಾಖೆಯವರು,ಆರೋಗ್ಯ ಇಲಾಖೆಯವರು ಕಾಳಜಿ ವಹಿಸಿದ್ದರು.

ವರದಿ: ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!