Ad imageAd image

ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಚಾಲಕನ ರಕ್ಷಣೆ

Bharath Vaibhav
ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಚಾಲಕನ ರಕ್ಷಣೆ
WhatsApp Group Join Now
Telegram Group Join Now

———————————ಸಹಕರಿಸಿದ ಗ್ರಾಮಸ್ಥರಿಗೆ ಹರ್ಷ ವ್ಯಕ್ತಪಡಿಸಿದ ಸಿಪಿಐ ದೌಲತ್ ಎನ್ ಕೆ.

ಸೇಡಂ: ತಾಲೂಕಿನ ಮೆದಕ್ ಗ್ರಾಮದ ಹೈದ್ರಾಬಾದ್ ಸಿಂದಗಿ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಸಾವು ಬದುಕಿನ ಮಧ್ಯೆ ಹೊರಡುತ್ತಿದ್ದ ಉತ್ತರಪ್ರದೇಶದ ಮೂಲದ ಧರ್ಮೇಂದ್ರ ಸಿಂಗ್ ಎಂಬ ಚಾಲಕನನ್ನು ಮುಧೋಳ ಪಿಐ ದೌಲತ್ ಎನ್ ಕುರಿ ಅವರ ನೇತೃತ್ವದಲ್ಲಿ ಸತತ ಐದು ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.

ಚಾಲಕ ಬದುಕಿರುವ ಮಾಹಿತಿ ತಿಳಿದ ತಕ್ಷಣವೆ ಮೂರು ಜೆಸಿಬಿ, ಸಿಲಿಂಡರ್ ಸ್ಪೋಟಕ ಆತಂಕ ಇರುವುದರಿಂದ ಅಗ್ನಿಶಾಮಕ ಹಾಗೂ ಆಂಬುಲೆನ್ಸ್ ತರಿಸಿ ಐದು ಗಂಟೆ ಕಾರ್ಯಾಚರಣೆ ನಡೆಸಿ ಚಾಲಕನನ್ನು ರಕ್ಷಿಸಲಾಗಿದೆ ಎಂದು ಪಿಐ ದೌಲತ್ ತಿಳಿಸಿದ್ದಾರೆ.

ರಾಜ್ಯ ಹೆದ್ದಾರಿ ಮೂಲಕ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಕಬ್ಬಿನ ಸರಕು ತುಂಬಿದ್ದ ಲಾಂಗ್ ಚೆಸ್ಸಿ ಲಾರಿ ಹಾಗೂ ಬಿಸ್ಕಿಟ್ ತುಂಬಿದ್ದ ಹೈದರಾಬಾದ್ ನಿಂದಾ ಹುಬ್ಬಳ್ಳಿಗೆ ಸಾಗುತ್ತಿದ್ದ ಟಾಟಾ 1717 ಗೂಡ್ಸ್ ಕಂಟೈನರ್ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅವರ ಅಪಘಾತ ತೀವ್ರತೆಗೆ ಎರಡು ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದೆ ಲಾಂಗ್ ಚೆಸ್ಸಿ ವಾಹನದ ಅವಶೇಷಗಳಡಿ ಸಿಲುಕಿದ್ದ ಚಾಲಕನನ್ನು ರಕ್ಷಿಸಲಾಗಿದೆ ಇನ್ನೊಂದು ಚಾಲಕನಿಗೆ ಗಾಯಾಳುಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಿಐ ದೌಲತ್ ಅವರು ಹೇಳಿದ್ದಾರೆ.

ಅಪಘಾತ ತೀವ್ರತೆ ನೋಡಿದರೆ ಅವಶೇಷಗಳಡಿ ಸಿಲುಕಿದ್ದ ಚಾಲಕ ಮೃತಪಟ್ಟಿರಬೇಕು ಎಂದು ಅನುಮಾನಗಳು ಉಂಟಾದವು. ಘಟನೆ ನಡೆದ ತಕ್ಷಣ ಸ್ಥಳದಲ್ಲಿ ಜಮಾಯಿಸಿ ಮೆದಕ್ ಗ್ರಾಮಸ್ಥರು ಅವಶೇಷಗಳಡಿ ಜೈಶ್ರೀರಾಮ್ ಎಂಬ ಘೋಷಣೆಗಳು ಕೇಳಿಬಂದವು ಸತತ ಐದು ಗಂಟೆಗಳ ಕಾರ್ಯಾಚರಣೆ ನಂತರ ಚಾಲಕ ಬದುರಿಕುವುದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದರು ವಿಷಯ ತಿಳಿದ ತಕ್ಷಣ ಚಾಲಕನನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಸದ್ಯ ಚಾಲಕನು ಚಿಕಿತ್ಸೆ ಪಡೆಯುತ್ತಿದ್ದಾನೆ ಅಪಾಯ ಸ್ಥಿತಿಯಿಂದ ಹೊರಬಂದಿದ್ದಾರೆ ಎಂದು ಪಿಐ ಅವರು ಪತ್ರಿಕೆಗೆ ಮಾಹಿತಿ ನೀಡಿದರು.

ರಾತ್ರಿ ಸಮಯದಲ್ಲಿ ಸುಮಾರು ಐದು ಗಂಟೆಗಳ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಪೊಲೀಸರಿಗೆ ಸಹಕರಿಸಿ ಒಂದು ಜೀವವನ್ನು ಉಳಿಸಲು ಪ್ರಯತ್ನ ಮಾಡಿದಕ್ಕೆ ತುಂಬ ಹೆಮ್ಮೆ ಎನಿಸುತ್ತಿದೆ ಎಂದು ಪಿಐ ದೌಲತ್ ಎನ್ ಕೆ ಅವರು ಹರ್ಷ ವ್ಯಕ್ತಪಡಿಸಿದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!