ನವದೆಹಲಿ: ಸರ್ಕಾರಿ ಕಚೇರಿಗಳಲ್ಲಿ (Government Office) ಬಳಕೆಯಾಗದೇ ಉಳಿದಿರುವ ಹಲವು ವಸ್ತುಗಳನ್ನು (Scrap) ಹೊರತೆಗೆದು, ಶುದ್ಧಗೊಳಿಸುವ ಕೆಲಸ ನಡೆಯುತ್ತಿದೆ. ಇದರಲ್ಲಿ 11.58 ಲಕ್ಷ ಆಫೀಸ್ ಸ್ಥಳಗಳಲ್ಲಿದ್ದ 29 ಲಕ್ಷ ಫೈಲ್ಗಳನ್ನು ಹೊರತೆಗೆಯಲಾಗಿದೆ.
800 ಕೋಟಿ ಆದಾಯ
ಕೇಂದ್ರ ಸರ್ಕಾರದ ಈ ನಡೆಯಿಂದ 232 ಲಕ್ಷ ಚದರ ಅಡಿಯಷ್ಟು ಕಚೇರಿ ಸ್ಥಳವು ಸ್ಕ್ರ್ಯಾಪ್ಗಳಿಂದ ಮುಕ್ತಗೊಂಡಿದೆ. ಅಕ್ಟೋಬರ್ 2ರಿಂದ 31ರವರೆಗೂ ನಡೆದ ಈ ಅಭಿಯಾನದಲ್ಲಿ ಹೊರತೆಗೆಯಲಾದ ಫೈಲ್ ಇತ್ಯಾದಿ ಸ್ಕ್ರ್ಯಾಪ್ಗಳನ್ನು ಮಾರಲಾಯಿತು. ಇದರಿಂದ ಸರ್ಕಾರಕ್ಕೆ ಸುಮಾರು 800 ಕೋಟಿ ಆದಾಯವೂ ಸಿಕ್ಕಿದೆ.
ಕಳೆದ ತಿಂಗಳಷ್ಟೇ ನಡೆದ ಬೃಹತ್ ಸ್ವಚ್ಛತಾ ಅಭಿಯಾನದ ಸಮಯದಲ್ಲಿ ಸ್ಕ್ರ್ಯಾಪ್ ಮಾರಾಟ ಮಾಡಿದ ಕೇಂದ್ರ ಸರ್ಕಾರವು, ಬರೋಬ್ಬರಿ 800 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ.
ಅಕ್ಟೋಬರ್ನ ಈ ಒಂದೇ ತಿಂಗಳಲ್ಲಿ ಸರ್ಕಾರಕ್ಕೆ ಸ್ಕ್ರ್ಯಾಪ್ಗಳಿಂದ 800 ಕೋಟಿ ರೂ ಆದಾಯ ಸಿಕ್ಕಿದೆ. ಸರ್ಕಾರ ಪ್ರತೀ ವರ್ಷ ಒಂದು ಅಥವಾ ಎರಡು ಬಾರಿ ಇಂಥ ಅಭಿಯಾನ ನಡೆಸುತ್ತದೆ. 2021ರಲ್ಲಿ ಆರಂಭಿಸಿದ ಈ ಕಾರ್ಯದಿಂದ ಸರ್ಕಾರ ಈವರೆಗೆ 4,100 ಕೋಟಿ ರೂ ಆದಾಯ ಗಳಿಸಿರುವುದು ಗಮನಾರ್ಹ.




