ನಾಶಿಕ್: ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ ಇಲ್ಲಿನ ಗಾಲ್ಫ ಕ್ಲಬ್ ಮೈದಾನದಲ್ಲಿ ನಡೆದಿರುವ ಬಿ’ ಗುಂಪಿನ ರಣಜಿ ಕ್ರಿಕೆಟ್ ಪಂದ್ಯಾವಳಿಯ ಲೀಗ್ ಪಂದ್ಯದ ನಾಲ್ಕನೇ ದಿನ ಕರ್ನಾಟಕ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗೆ 225 ರನ್ ಗಳಿಸಿದ್ದು, ಒಟ್ಟಾರೆ 238 ರನ್ ಗಳ ಮುನ್ನಡೆ ಪಡೆದಿದೆ.
ಕರ್ನಾಟಕ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 313 ರನ್ ಗಳಿಸಿದ್ದರೆ, ಮಹಾರಾಷ್ಟ್ರ 300 ರನ್ ಗಳಿಸಿತ್ತು. ಹೀಗಾಗಿ ಕರ್ನಾಟಕಕ್ಕೆ 13 ರನ್ ಗಳ ಮಹತ್ವದ ಮೊದಲ ಇನ್ನಿಂಗ್ಸ್ ಮುನ್ನಡೆ ದೊರಕಿತ್ತು. ಪಂದ್ಯ ಡ್ರಾದತ್ತ ಸಾಗಿದ್ದು, ಕರ್ನಾಟಕಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ ದೊರಕಿದ್ದು, ರಾಜ್ಯ ತಂಡಕ್ಕೆ ಈ ಪಂದ್ಯದಿಂದ 3 ಅಂಕಗಳು ಖಚಿತಗೊಂಡಿವೆ
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 313
ಮಯಾಂಕ ಅಗರವಾಲ್ 80, ಸಮರನ್ ರವಿಚಂದ್ರನ್ 54, ಶ್ರೇಯಸ್ ಗೋಪಾಲ್ 71,
ಅಭಿನವ್ ಮನೋಹರ್ 47, ಜಲಜ್ ಸೆಕ್ಸೆನಾ 94 ಕ್ಕೆ 4, ಮುಖೇಶ್ ಚೌಧರಿ 66 ಕ್ಕೆ 3,
ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್ 300
ಜಲಜ್ ಸೆಕ್ಸೆನಾ 72, ಪೃಥ್ವಿ ಶಹಾ 71, ಶ್ರೇಯಸ್ ಗೋಪಾಲ್ 70 ಕ್ಕೆ 4, ಮೊಹ್ಸಿನ್ ಖಾನ್ 64 ಕ್ಕೆ 3)
ಕರ್ನಾಟಕ ದ್ವಿತೀಯ ಇನ್ನಿಂಗ್ಸ್ 5 ವಿಕೆಟ್ ಗೆ 225
ಮಯಾಂಕ ಅಗರವಾಲ್ 103 ( 237 ಎಸೆತ, 8 ಬೌಂಡರಿ, 1 ಸಿಕ್ಸರ್), ಅಭಿನವ್ ಮನೋಹರ್ 62 ( 79 ಎಸೆತ, 3 ಬೌಂಡರಿ, 2 ಸಿಕ್ಸರ್)




