Ad imageAd image

47.85 ಕೋಟಿ ರೂಪಾಯಿ ಮೊತ್ತದ ನೀರು ಸರಬರಾಜು ಯೋಜನೆಗೆ ಡಾ.ಶರಣಪ್ರಕಾಶ ಪಾಟೀಲರಿಂದ ಅಡಿಗಲ್ಲು

Bharath Vaibhav
47.85 ಕೋಟಿ ರೂಪಾಯಿ ಮೊತ್ತದ ನೀರು ಸರಬರಾಜು ಯೋಜನೆಗೆ ಡಾ.ಶರಣಪ್ರಕಾಶ ಪಾಟೀಲರಿಂದ ಅಡಿಗಲ್ಲು
WhatsApp Group Join Now
Telegram Group Join Now

ಸೇಡಂ: ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿಯಲ್ಲಿ ಸೇಡಂ ಪಟ್ಟಣಕ್ಕೆ ಕಾಚೂರ್ ಬ್ಯಾರೇಜ್ ಮೂಲದಿಂದ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಸಚಿವರಾದ ಡಾ.ಶರಣಪ್ರಕಾಶ ಪಾಟೀಲರು ನೆರವೇರಿಸಿದರು.

47.85 ಕೋಟಿ ರೂಪಾಯಿ ಮೊತ್ತದ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಸೇಡಂ ಪಟ್ಟಣದ ಸರ್ವೇ ನಂಬರ್ 705 ಆಶ್ರಯ ಕಾಲೋನಿಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಸೇಡಂ ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರು ದೊರಕಿಸಿ ಕೊಡುವ ನಿಟ್ಟಿನಲ್ಲಿ ಈ ಕಾಮಗಾರಿ ಆರಂಭವಾಗಿದೆ ಎಂದರು.

ವಿಧಾನಸಭಾ ಕ್ಷೇತ್ರದ ಸಾರ್ವಜನಿಕರಿಗೆ ಕುಡಿಯುವ ನೀರು ದೊರಕಿಸುವ ಬದ್ಧತೆ ನನ್ನದಾಗಿದ್ದು, ಸೇಡಂ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಇಂದಿನ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರ್, ಬಸವರಾಜ ಪಾಟೀಲ್, ತಹಸೀಲ್ದಾರರಾದ ಶ್ರೇಯಾಂಕ ಧನುಶ್ರೀ, ಎಸಿ ಪ್ರಭುರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣ ರೆಡ್ಡಿ ಪಾಟೀಲ್ ಮತ್ತು ಸ್ಥಳೀಯ ಜನಪ್ರತಿನಿಧಿಗಳು, ತಾಲೂಕಾಡಳಿತ, ಪುರಸಭೆ ಹಾಗೂ ನಗರಾಭಿವೃದ್ಧಿ ಇಲಾಖೆ ಮುಖ್ಯಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!