ಇಳಕಲ್ : ನಗರದ ಮೋನಲ್ ಭಂಡಾರಿ ಅವರು ಕರ್ನಾಟ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಎಲ್.ಎಲ್.ಎಮ್ ಸ್ನಾತಕೋತ್ತರ ವಿಭಾಗದ ಭಾರತದ ಸಂವಿಧಾನ ವಿಷಯದಲ್ಲಿ ರಾಜ್ಯಕ್ಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ, ಸುವರ್ಣ ಪದಕ ಪುರಸ್ಕೃತೆ ಆಗಿದ್ದಾರೆ.
ಇಳಕಲ್ ನಗರದ ಪ್ರಸಿದ್ಧ ಜೈನ್ ಬುಕ್ಸ್ಟಾಲ್ ಮಾಲಿಕ ಪಾರಸಮಲ್(ಪ್ರದೀಪ) ಭಂಡಾರಿ ಅವರ ಎರಡನೇ ಸುಪುತ್ರಿ ಮೋನಲ್ ಭಂಡಾರಿ ಅವರಿಗೆ ಇಳಕಲ್ ನಗರ ಹೋರಾಟ ಸಮಿತಿ ವತಿಯಿಂದ ಹಾಗೂ ಪತ್ರಕರ್ತರ ಬಳಗದವರಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಇಳಕಲ್ಲ ನಗರಾಭಿವೃದ್ಧಿ ಹೋರಾಟ ಸಮಿತಿ ರಿ ಅಧ್ಯಕ್ಷ ಸಿ.ಸಿ.ಚಂದ್ರಾಪಟ್ಟಣ ಪತ್ರಕರ್ತರಾದ ಸಜ್ಜನರಾಜ ಮೆಹತಾ, ಮಹಾಂತೇಶ ಗೊರಜನಾಳ, ಬಸವರಾಜ ಮಠದ, ಮಹಾಂತೇಶ ವಂಕಲಕುಂಟಿ, ಮುರ್ತುಜಾ ಬಾದಾಮಿ, ಕಾಸಿಂಅಲಿಶಾ ಮಕಾನದಾರ್. ಹಿರಿಯ ಮುಖಂಡರಾದ ಎಂ.ವಿ.ಪಾಟೀಲ, ಶರಣಪ್ಪ ಅಕ್ಕಿ, ಲಕ್ಷ್ಮಣಸಾ ಅರಸಿದ್ದಿ ಅಹ್ಮದ್ (ಕಂಡಕ್ಟರ್ ) ಬಾಗವಾನ ಇತರರು ಉಪಸ್ಥಿತರಿದ್ದರು.
ವರದಿ : ದಾವಲ್ ಶೇಡಂ




