ಯರಗಟ್ಟಿ: ಗ್ರಾಮ ಪಂಚಾಯತ್ ಸದಸ್ಯನ ಕಿಡ್ನಾಪ ಮಾಡಿ ಮಾರಣಾಂತಿಕ ಹಲ್ಲೆ. ಕಿಡ್ನಾಪ್ ಮಾಡಿ ಎಸ್ಕೇಪ್ ಆಗ್ತಿರೋ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲೆ ಸೆರೆ.

ಸಮೀಪದ ಸೋಪ್ಪಡ್ಲ ಗ್ರಾಮದಲ್ಲಿ ಘಟನೆ. ಸೋಪ್ಪಡ್ಲ ಗ್ರಾಮ ಪಂಚಾಯತ್ ಸದಸ್ಯ ಕಿರಣ ಹುಣಶ್ಯಾಳ ( 31) ಕಿಡ್ನ್ಯಾಪ ಆಗಿರುವ ವ್ಯಕ್ತಿ. ಗಾಯಗೊಂಡ ಕಿರಣ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಗೆಳೆಯನ ಮದುವೆಗೆ ಹೋಗಿ ವಾಪಸ್ ಬರೋವಾಗ ಕಿರಣ ಹುಣಶ್ಯಾಳ ಕಿಡ್ನಾಪ ಮಾಡಿರೋ ಖತರ್ನಾಕ ಖದೀಮರು. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದಿರೋ ಕಿಡ್ನಾಪ ಪ್ರಕರಣ ಎಂದು ತಿಳಿದುಬಂದಿದೆ.
ಸೋಪ್ಪಡ್ಲ ಗ್ರಾಮದ ಸಂಜು ತಳವಾರ,ಪ್ರವೀಣ್ ತಳವಾರ, ಬಸವರಾಜ ಗಸ್ತಿ ವಿರುದ್ಧ ಕಿಡ್ನಾಪ್ ಆರೋಪ.
ಗೆಳೆಯನ ಮದುವೆ ಮುಗಿಸಿ ವಾಪಸ್ ಬರುವಾಗ ಕಿಡ್ನಾಪ ಮಾಡಿರೋ ಆರೋಪಿಗಳು.
ಬಳಿಕ ಸೋಪ್ಪಡ್ಲ ಗ್ರಾಮಕ್ಕೆ ಕರೆತಂದು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಆರೋಪ ಕೇಳಿಬಂದಿದೆ.
ಸ್ಥಳೀಯ ಮಾಹಿತಿ ಮೇರೆಗೆ ಆಗಮಿಸಿದ ಪೊಲೀಸರಿಂದ ಕಿರಣ ಹುಣಶ್ಯಾಳನನ್ನು ರಕ್ಷಣೆ ಮಾಡಿದ್ದಾರೆ.
ಕಳೆದ ಎರಡು ತಿಂಗಳ ಹಿಂದಷ್ಟೇ ಗ್ರಾ. ಪಂ. ಸದಸ್ಯ ಕಿರಣ ಹುಣಶ್ಯಾಳ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿರುವ ಪ್ರವೀಣ್ ತಳವಾರ. ನನಗೆ ಎರಡು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು ಹಣ ಕೊಡದೇ ಇದ್ದಾಗ ಕಿಡ್ನಾಪ ಮಾಡಿ ಹಲ್ಲೆ ಮಾಡಿದ್ದಾರೆ ಎಂದ ಕಿರಣ ಹುಣಶ್ಯಾಳ ತಿಳಿಸಿದ್ದಾರೆ. ಈ ಕುರಿತು ಮುರಗೋಡ ಪೊಲೀಸ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಈರಣ್ಣಾ ಹೂಲ್ಲೂರ




