ಇಲಕಲ್: ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ, ಭಾರತ ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಣ ತಜ್ಞ ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಜನ್ಮದಿನವನ್ನು “” ರಾಷ್ಟ್ರೀಯ ಶಿಕ್ಷಣ ದಿನ”ವನ್ನಾಗಿ ಆಚರಿಸಲಾಗುತ್ತದೆ ಎಂದು ಡೈಟ್ ಸಂಸ್ಥೆಯ ಕಿರಿಯ ಸಹಾಯಕ ಮುಸ್ತಾಕಅಲಿ ಜಾಗಿರದಾರ ಹೇಳಿದರು.

ಅವರು ನಗರದ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆಯಲ್ಲಿ ಶಿಕ್ಷಣ ತಜ್ಞ, ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಆಜಾದರವರ 137ನೇ ಜನ್ಮ ದಿನಾಚರಣೆಯನ್ನು ರಾಷ್ಟ್ರಿಯ ಶಿಕ್ಷಣ ದಿನಾಚರಣೆಯನ್ನು ಅದ್ಧೂರಿಯಾಗಿ ವಿವಿಧ ಸ್ಪಧೆ೯ಗಳ ಮೂಲಕ ಹಮ್ಮಿಕೊಂಡಿರುವುದು ಶ್ಲಾಘನಿಯವಾಗಿದೆ ಎಂದು ಹಷ೯ ವ್ಯಕ್ತಪಡಿಸಿದರು.
ರಾಷ್ಟ್ರದ ಮೊದಲ ಶಿಕ್ಷಣ ಸಚಿವರಾಗಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಸಾರ್ವತ್ರಿಕ ಕಡ್ಡಾಯ ಶಿಕ್ಷಣ, ಯು.ಜಿ.ಸಿ ರಾಷ್ಟ್ರಿಯ ಶಿಕ್ಷಣ ನೀತಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದರು. ಉತ್ತಮ ರಾಜಕಾರಣಿಯಾಗಿ ಸೇವೆ ಸಲ್ಲಿಸಿದ್ದ ಡಾ ಮೌಲಾನ ಅಬ್ಬುಲ್ ಕಲಾಂ ಅಜಾದ್ ಅವರು ಭಾರತದ ಶಿಕ್ಷಣ ಕ್ಷೇತ್ರವನ್ನು ಸುಧಾರಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರ ಕೊಡುಗೆಗಳನ್ನು ಸ್ಮರಿಸಿಕೊಂಡರು.
ವೇದಿಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸಿದ್ಧನಗೌಡ ಮಾಚಾ, ದಾವಲಸಾಬ ನಾಯಕವಾಡಿ, ಶಿಕ್ಷಕರಾದ ಮೆಹಬೂಬ ಗಂಜಿಕೋಟಿ, ಅಮರೇಶ ಬಿಜ್ಜಲ, ಅತಾರಸೂಲ ಕನೂ೯ಲ, ಶಕುಂತಲಾ ಸಂಗಮ ಹಾಗೂ ಮಾಹಿತಿ ಕೇಂದ್ರದ ಕೆ.ಎಚ್.ಸೋಲಾಪೂರ, ಎಲ್.ಕೆ.ಜಿ ಶಾಲಾ ಶಿಕ್ಷಕಿ ಹಣಗಿ ಉಪಸ್ಥಿತರಿದ್ದರು.
ಶಾಲೆಯಿಂದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕುರಿತು ಸಕಾ೯ರದಿಂದ ಸಿಗುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವ ಬಿತ್ತಿಪತ್ರಗಳನ್ನು ಹಿಡಿದು ಜಾಗೃತಿ ಜಾತಾ ನಡೆಸಿದರು. ಶಾಲೆಯಲ್ಲಿ ಮೌಲಾನಾ ಆಜಾದರ ಕುರಿತು ಭಾಷಣ ಸ್ಪಧೆ೯, ಚಿತ್ರಕಲೆ ಹಾಗೂ ಪ್ರಭಂದ ಸ್ಪಧೆ೯ ಏಪ೯ಡಿಸಲಾಗಿತ್ತು.
ಶ್ರೀನಿಧಿ ಕೃಷ್ಣಾಪೂರ ಹಾಗೂ ಲಾವಣ್ಯ ರಾಠೋಡ ಪ್ರಾರ್ಥನೆ ಗೀತೆ ಹಾಡಿದರು, ವಿದ್ಯಾರ್ಥಿ ಪ್ರತಿನಿಧಿ ವಾಹಿದ ಕೋಡಿಹಾಳ ಸ್ವಾಗತಿಸಿದರು.ಮರಿಯಂ ತಾಳಿಕೋಟಿ ಕಿರಾತ್ ಪಠಿಸಿದರು. ತೌಫಿಕ್ ನಾಥ್ ಪಠಿಸಿದರು. ರಿಹಾನ ಗಂಜಿಹಾಳ ಹಮ್ದ ಹೇಳಿದರು. ಜೋಯಾ ಚೋಪದಾರ ನಿರೂಪಿಸಿದರು. ಫೈಸಲ್ ಎಲಿಗಾರ ವಂದಿಸಿದರು.
ವರದಿ: ದಾವಲ್ ಶೇಡಂ




