Ad imageAd image

ನಿಸರ್ಗದ ಕಡೆಗೆ ಜನಮನ ಸೆಳೆಯುವ ಯಲಕಪಳ್ಳಿಯ ಬುದ್ಧ ವಿಹಾರಕ್ಕೆ ಸಿದ್ದಪಡಿಸಿದ ಸ್ಥಳ

Bharath Vaibhav
ನಿಸರ್ಗದ ಕಡೆಗೆ ಜನಮನ ಸೆಳೆಯುವ ಯಲಕಪಳ್ಳಿಯ ಬುದ್ಧ ವಿಹಾರಕ್ಕೆ ಸಿದ್ದಪಡಿಸಿದ ಸ್ಥಳ
WhatsApp Group Join Now
Telegram Group Join Now

ಚಿಂಚೋಳಿ: ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಮಹಾತ್ಮ ಗೌತಮ್ ಬುದ್ಧ ಚಾರಿಟೇಬಲ್ ಟ್ರಸ್ಟ್‌ನ ಮಾನವೀಯ ಸೇವಾಭಾವದಿಂದ, ಯಲಕಪಳ್ಳಿ ಗ್ರಾಮದ ಸರ್ವೇ ನಂ.137 ರ 7 ಎಕರೆ 10 ಗುಂಟೆ ಹರಿಜನ ಜಮೀನಿನಲ್ಲಿ ಮಹಾತ್ಮ ಗೌತಮ್ ಬುದ್ಧರ ಮೂರ್ತಿ ಪ್ರತಿಷ್ಠಾಪನೆ ಶಾಂತಿ, ಜ್ಞಾನ ಮತ್ತು ಮಾನವೀಯತೆಯ ಸಂಕೇತವಾಗಿ ನೆರವೇರಿಸಲಾಗಿದೆ.

ಮೂರ್ತಿಯ ಸುತ್ತಲೂ ಹಚ್ಚಹಸಿರಿನ ವಾತಾವರಣ, ಹಕ್ಕಿಗಳ ಕಲರವ ಮತ್ತು ಪ್ರಕೃತಿಯ ನಿಶಬ್ದತೆಯೊಂದಿಗೆ ಈ ತಾಣ ಈಗ ಧ್ಯಾನ ಮತ್ತು ಆತ್ಮಶಾಂತಿಯ ಮಂದಿರವಾಗಿ ಪರಿವರ್ತನೆಗೊಂಡಿದೆ. ಬೆಳಿಗ್ಗೆ ಮತ್ತು ಸಾಯಂಕಾಲದ ಸಮಯದಲ್ಲಿ ಅನೇಕ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನರು ಇಲ್ಲಿ ಬಂದು ಧ್ಯಾನ, ಪ್ರಾರ್ಥನೆ ಮತ್ತು ಮೌನ ಚಿಂತನೆಗಳ ಮೂಲಕ ಮನಸ್ಸಿನ ನೆಮ್ಮದಿಯನ್ನು ಪಡೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಗೋಪಾಲ ರಾಂಪುರೆ “ಬುದ್ಧರು ನಮಗೆ ಹೊರಗಿನ ಲೋಕದಲ್ಲಲ್ಲ, ನಮ್ಮೊಳಗಿನ ಮನಸ್ಸಿನ ಆಳದಲ್ಲಿ ಶಾಂತಿಯನ್ನು ಹುಡುಕುವ ಮಾರ್ಗವನ್ನು ತೋರಿಸಿದ್ದಾರೆ. ಧ್ಯಾನ ಎನ್ನುವುದು ಆತ್ಮಜ್ಞಾನದ ದಾರಿ; ಅದು ನಮ್ಮ ಚಿಂತನೆಗಳನ್ನು ಶುದ್ಧಗೊಳಿಸುವ ಪವಿತ್ರ ಪ್ರಯಾಣ. ಯಲಕಪಳ್ಳಿಯ ಈ ಸ್ಥಳ ಜನರ ಹೃದಯಗಳಲ್ಲಿ ಶಾಂತಿಯ ಬೆಳಕನ್ನು ಹಚ್ಚಲಿದೆ.”

ಟ್ರಸ್ಟ್ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಈ ಸ್ಥಳವು ಸುತ್ತಮುತ್ತಲಿನ ಜನರ ಮನಸ್ಸು ಸೆಳೆಯುವ ಆಧ್ಯಾತ್ಮಿಕ ತಾಣವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಬೌದ್ಧ ಧ್ಯಾನ ಶಿಬಿರಗಳು ಮತ್ತು ಶಾಂತಿ ಪ್ರಚಾರ ಕಾರ್ಯಕ್ರಮಗಳನ್ನು ನಡೆಯಲಿ,
“ಶಾಂತಿ, ಜ್ಞಾನ,ಧ್ಯಾನ” ಅಂತರಂಗದ ಬೆಳಕಿನ ದಾರಿ, ಮನದ ನೆಮ್ಮದಿಯ ತಾಣವಾಗಲಿ ಎಂದರು, ಇದೆ ಸಂದರ್ಭದಲ್ಲಿ: ಬುದ್ಧ ವಂದನೆ ಮಾಡಿ ಗೌರವ ಸಲ್ಲಿಸಿದರು.ಉಪಸಕರಾದ ರಾಹುಲ್ ಯಾಕಪೂರ್,ದೇವೆಂದ್ರ ಕಟ್ಟಿಮನಿ, ವಿಶಾಲ ಕಾನ್ಸಿ , ಹಣಮಂತ ಕುಡ್ಡಳಿ ಮುಂತಾದವರು ಉಪಸ್ಥಿತರಿದ್ದರು.

ವರದಿ: ಹಣಮಂತ ಕುಡಹಳ್ಳಿ

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!