——————————-ಸಂಸದೆ ಪ್ರಿಯಾಕಾ ಜಾರಕಿಹೊಳಿ ಅವರಿಂದ ಕಾಮಗಾರಿಗೆ ಚಾಲನೆ
ರಾಯಬಾಗ್: ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಾವನಸೌಂದತ್ತಿ ಗ್ರಾಮದಲ್ಲಿ ಕೃಷ್ಣಾ ನದಿಯಿಂದ ರಾಯಬಾಗ ತಾಲೂಕಿನ 39 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಏತ ನೀರಾವರಿ ಯೋಜನೆಯ ಕಾಮಗಾರಿ ಇದೇ ನವೆಂಬರ್ 24ರಂದು ಪ್ರಾಯೋಗಿಕ ಚಾಲನೆಗೆ ಸಿದ್ಧವಾಗುತ್ತಿದೆ.
ಇಂದು ಸ್ಥಳಕ್ಕೆ ಭೇಟಿ ನೀಡಿ ಯೋಜನೆಯ ಪೂರ್ವಭಾವಿ ತಯಾರಿಗಳನ್ನು ಪರಿಶೀಲಿಸಿ, ನವೆಂಬರ್ 26ರಿಂದ ಯೋಜನೆಯ ಸಂಪೂರ್ಣ ಕಾರ್ಯಗತಗೊಳಿಸುವಿಕೆ ಕುರಿತು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಈ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ ರಾಯಬಾಗ ತಾಲೂಕಿನ ರೈತರಿಗೆ ಶಾಶ್ವತ ನೀರಾವರಿ ಸೌಲಭ್ಯ ದೊರೆತು, ಕೃಷಿಯಲ್ಲಿ ಹೊಸ ಚೈತನ್ಯ ಮತ್ತು ಸಮೃದ್ಧಿಯ ಹೊಸ ಯುಗಕ್ಕೆ ದಾರಿ ತೆರೆಯಲಿದೆ. ರಾಯಬಾಗ ಹಸಿರು ಕ್ರಾಂತಿ ರೈತರಲ್ಲಿ ಈ ವಿಷಯ ಮಂದಹಾಸ ಮೂಡಿಸುತ್ತಿದೆ.
ವರದಿ: ರಾಜು ಮುಂಡೆ




