ಹುಬ್ಬಳ್ಳಿ:ಬಿಹಾರ ಚುನಾವಣೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೋಲಿನ ಶತಕ ಹೊಡೆಯುವ ಮೂಲಕ ತಾವು ಮುಳುಗುವುದರ ಮೂಲಕ ರಾಗಾ ಬೇರೆಯವರನ್ನು ಮುಳುಗಿಸುತ್ತಿದ್ದಾರೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರ ಯಾರ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಾರೋ ಅವರೆಲ್ಲ ಮುಳುಗುತ್ತಾರೆ ಹೀಗಾಗಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಲೇವಡಿ ಮಾಡಿದರು.
ಬಿಹಾರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ನಿತೇಶ್ ಕುಮಾರ್ ಅವರಿಗೆ ಮತದಾರ ಸ್ಪಷ್ಟ ಬಹುಮತ ನೀಡಿದ್ದಾರೆ ಎಂದರು.
ಕಬ್ಬು ಬೆಲೆ ನಿರ್ವಹಿಸವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಕೆಲಸ ಮಾಡಬೇಕಿತ್ತು. ನಿಜವಾದ ರೈತರು ಕಬ್ಬು, ಟ್ರ್ಯಾಕ್ಟರ್ ಸುಡಲ್ಲ. ಅವರಿಗೆ ಬೆಲೆ ಹಾಗೂ ದುಡ್ಡಿನ ಅಗತ್ಯ ಇರುತ್ತದೆ. ಅವರು ಈ ಕೆಲಸ ಮಾಡುವುದಿಲ್ಲ ಸುಟ್ಟಿರುವ ಬಗ್ಗೆ ಸರ್ಕಾರ ಕಿಡಿಗೇಡಿ ಎಂದು ಹೇಳಿಕೆ ನೀಡುತ್ತದೆ. ಹೋರಾಟದಲ್ಲಿ ಯಾರು ನುಸುಳಿಕೊಂಡು ವಿದ್ವಾಂಸಕ ಕೃತ್ಯ ನಡೆಸಲು ಯಾಕೆ ಅವಕಾಶ ನೀಡುತ್ತೀರಿ? ಪೊಲೀಸರಿಗೆ ಹೊಡೆಯುತ್ತಾರೆ ಎಂದರೆ ಏನು ಅರ್ಥಾ? ರೈತರ ಹೋರಾಟದಲ್ಲಿ ನುಸುಳೊಕೊಂಡು ಕೃತ್ಯ ನಡೆಸುತ್ತಾರೆ ಎಂದರೆ, ಸರ್ಕಾರ ಇದೆಯೋ ಇಲ್ಲವೋ ಎಂದು ಕಿಡಿಕಾರಿದರು.
ದೆಹಲಿಯಲ್ಲಿ ಕಾರ್ ಬ್ಲಾಸ್ಟ್ ರಾಜಕೀಯಕ್ಕೆ ತಳಕು:ಇಲ್ಲಿನ ಕಾಂಗ್ರೆಸ್ ನಾಯಕರೇ ಜಾಸ್ತಿ ಹೇಳುತ್ತಿದ್ದಾರೆ. ಅವರ ಯೋಗ್ಯತೆಯೇ ಅಷ್ಟು, ಅದಕ್ಕಾಗಿ ಅವರ ಸೋಲು ಅನುಭವಿಸಿದ್ದು ಎಂದರು.
ಬಿಹಾರ ಚುನಾವಣೆ ವೋಟ್ ಚೋರಿ ಆರೋಪ:ತೆಲಂಗಾಣ, ಹಿಮಾಚಲ ಪ್ರದೇಶ, ಕರ್ನಾಟಕ ಹಾಗೂ ಲೋಕಸಭಾ ಚುನಾವಣೆಯಲ್ಲಿ ತೊಂಬತ್ತೊಂಬತ್ತು ಸ್ಥಾನ ಬಂದಾಗ ವೋಟ್ ಚೋರಿ ಆಗಲ್ಲ. ಸೋಲು ಒಪ್ಪಿಕೊಂಡು ಪಕ್ಷ ಕಟ್ಟಬೇಕೋ ಅಥವಾ ಆರೋಪ ಮಾಡುತ್ತ ಓಡಾಡಬೇಕೋ? ಸಿಎಂ ಸಿದ್ದರಾಮಯ್ಯ ಮಾಸ್ ಲೀಡರ್, ಗೆದ್ದಿದ್ದಿ ಅವರಿಂದಲೇ, ಹೈಕಮಾಂಡ್ ಸಂಸ್ಕ್ರತಿಯಿಂದ ಅವರ ಪರವಾಗಿ ಮಾತನಾಡುತ್ತಿದ್ದಾರೆ ಎಂದರು.
ಗೆದ್ದಾಗ ರಾಹುಲ್ ಗಾಂಧಿ, ಸೋತರೆ ವೋಟ್ ಚೋರಿನಾ ರಾಹುಲ್ ಗಾಂಧಿ ಎಲ್ಲಿ ಇದ್ದಾರೆ? ಬಿಹಾರ ಹೋಗಿಲ್ಲ, ಪ್ರಚಾರ ಮಾಡಿಲ್ಲ ಇಂಡಿ ಘಟಬಂಧನ ಸೀಟ್ ಹೊಂದಾಣಿಕೆ ಆಗಿಲ್ಲ ಎಂದರು.
ವರದಿ:ಸುಧೀರ್ ಕುಲಕರ್ಣಿ




