ಚಿಂಚೋಳಿ : ಕಲ್ಬುರ್ಗಿಯ ಶರಣಬಸವೇಶ್ವರರ ದೇವಸ್ಥಾನದ ಅನುಭವ ಮಂಟಪದಲ್ಲಿ ಪೂಜ್ಯ ಲಿಂ.ಡಾ.ಶರಣಬಸವಪ್ಪ ಅಪ್ಪ ಅವರ 91 ಜನ್ಮದಿನೋತ್ಸವ ಪ್ರಯುಕ್ತ ಚಿಂಚೋಳಿ ತಾಲೂಕಿನ ವೀರಶೈವ ಲಿಂಗಾಯತ ಸಮಾಜ ವತಿಯಿಂದ ತುಮಕೂರು ಶ್ರೀಸಿದ್ದಗಂಗಾ ಮಠದ ಅಂಧ ಮಕ್ಕಳಿಗೆ ಭಾರತ ಸರ್ಕಾರದ ಉದ್ಯಮ ರಕ್ಷಣೆ ಮಂತ್ರಾಲಯದ ಸೀನಿಯರ್ ಮ್ಯಾನೇಜರ್ ಗಳಾದ ಉಮೇಶ್ ಪೂಜಾರಿ ಅಣವಾರವರು ಹಣ್ಣು ಹಂಪಲ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ್ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಪ್ರದೀಪ ದೇಶಮುಖ, ಮತ್ತು ತುಮಕೂರು ಶ್ರೀಸಿದ್ದಗಂಗಾ ಮಠದ ಅಂಧ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತಿ ಇದ್ದರು.
ವರದಿ : ಸುನಿಲ್ ಸಲಗರ




