ಕಾಗವಾಡ: ಶಾಲಾ ಶಿಕ್ಷಣ ಇಲಾಖೆ, (ಪದವಿ-ಪೂರ್ವ)ಬೆಂಗಳೂರು, ದಿನಾಂಕ:11.11.2025 0 14.11.2025 ಕಲಬುರ್ಗಿ ಜಿಲ್ಲೆಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ 2025-26ನೇ ಸಾಲಿನ ರಾಜ್ಯ ಮಟ್ಟದ ಬಾಲಕರ ಅಥ್ಲೆಟಿಕ್ಸ ಪಂದ್ಯಾವಳಿಯಲ್ಲಿ ಶಿವಾನಂದ ಪದವಿ-ಪೂರ್ವ ಮಹಾವಿದ್ಯಾಲಯ ಕಾಗವಾಡದ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿಯಾದ ಕುಮಾರ ಶಿವಾನಂದ ಸಿದರಾಯ ಮುಂಜೆ ಈತನು ಗುಡ್ಡಗಾಡು (ಕ್ರಾಸ್‌ಂಟ್ರಿ) ಓಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾನೆ ಈತನಿಗೆ ಆಡಳಿತ ಮಂಡಳಿ, ಪ್ರಾಚಾರ್ಯರು, ದೈಹಿಕ ನಿರ್ದೆಶಕರು ಸಿಬ್ಬಂದಿ ವರ್ಗದವರು ಶುಭ ಹಾರೈಸಿಸುತ್ತಾರೆ.
ವರದಿ: ಚಂದ್ರಕಾಂತ ಕಾಂಬಳೆ




