ರಾಯಚೂರು: ದೇವರು ವರಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ಬಳಗಾನೂರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯ ಪರಿಸ್ಥಿತಿ.
ನಮೂನೆ ಮೂರನ್ನು ಕೇಳಲು ಬಂದ ಉಧ್ಯಮಿ ಖಾಜಾಸಾಬ್ ಮೇಲೆ ಬಳಗಾನೂರು ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಶಿವಕುಮಾರ ನಾಯಕ ಮತ್ತವರ ಸಹೋದರ ಮೂಕಪ್ಪ ನಾಯಕ ದಾಳಿಮಾಡಿ ರಾಡಿಮಾಡಿಕೊಂಡ ವಿಷಯ ನಿಮಗೆಲ್ಲ ಗೊತ್ತಿದೆ ಅಂತ ಭಾವಿಸುತ್ತೇವೆ.
ಹಲ್ಲೆಗೊಳಗಾದ ಖಾಜಾಸಾಬ್ ನ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿದರೆ ಅವರು ಹೆದರಿ ಓಡೋಡಿ ಬಂದು ಕಾಡಿ ಬೇಡಿ ರಾಜಿಯಾಗಿಬಿಡುತ್ತಾರೆ. ನಾವು ಲಂಚಾವತಾರ ಮತ್ತೆ ಅಂದೇರಿ ದರ್ಬಾರನ್ನು ಮಾಡಬಹುದು ಕೋಟಿ ಕೋಟಿ ಲೂಟಿಮಾಡಬಹುದೆಂಬ ಭ್ರಮೆಯಲ್ಲಿದ್ದ ಬೊಂಬಾಟ್ ಬ್ರದರ್ಸ್ ಗೆ ಬ್ರಮನಿರಸನವಾಗಿದೆ.

ಹೇಗಾದರೂ ಮಾಡಿ ರಾಜಿ ಸಂಧಾನ ಮಾಡಿಕೊಂಡರಾಯಿತೆಂದು ಶಾಸಕ ಮತ್ತು ಶಾಸಕರ ಸಹೋದರ ಶಾಸಕಾಂಗದ ಅಧಿಕಾರ ಬಲಪ್ರಯೋಗ ನಡೆಸಿದ್ದಾರೆ. ಯಾರ ಮಾತಿಗೂ ಜಗ್ಗದ ಬಗ್ಗದ ಕುಗ್ಗದ ಖಾಜಾಸಾಬರ ಗಟ್ಟಿ ನಿಲುವು ನ್ಯಾಯಸಮುತ್ತ ಹೋರಾಟ ನೋಡಿ ಪಂಚಿಂಗ್ ಬ್ರದರ್ಸ್ ಗೆ ಶಾಕಿಂಗ್ ಆಗಿದೆ.
ಅದ್ಕ ನಮೂನೆ ಮೂರನ್ನು ಕೊಡದೆ ಕುಂಟಿ ನೆಪ ಹೇಳುತ್ತಾ ಸತಾಯಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಬಳಿ ದೂರು ನೀಡಿದಾಗ ಸ್ವತಹ ಜಿಲ್ಲಾಧಿಕಾರಿಗಳೇ ಆದೇಶ ಹೊರಡಿಸಿದರೂ ಮುಖ್ಯಾಧಿಕಾರಿಗಳು ವಿನಾಕಾರಣ ವಿಳಂಭ ಮಾಡುವ ಮೂಲಕ ಆರೋಪಿಗಳ ಬೆಂಬಲಕ್ಕೆ ನಿಂತಿದ್ದಾರೆ.
ಈ ಪಂಚಾಯ್ತಿಯ ಅಧ್ಯಕ್ಷ ಶಿವಕುಮಾರ ನಾಯಕ ಮತ್ತವರ ಸಹೋದರ ಮೂಕಪ್ಪ ನಾಯಕ
ಸಹೋದರರ ದೌರ್ಜನ್ಯ, ದಬ್ಬಾಳಿಕೆ, ದುರಾಡಳಿತಕ್ಕೆ ಕಾರ್ಯಾಂಗವೇ ಮಂಡಿಯೂರಿತೆ? ಶಾಸಕರೇ ಶಿವಕುಮಾರ ನಾಯಕ ಮತ್ತವರ ಸಹೋದರ ಮೂಕಪ್ಪ ನಾಯಕ
ಅವರ ಬೆಂಬಲಕ್ಕೆ ಟೊಂಕಕಟ್ಟಿ ನಿಂತರೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದೆ.
ಇತ್ತೀಚಿಗೆ ಅವರ ಗೂಂಡಾಗಿರಿ ಬೀದಿ ಬೀದಿಗಳಲ್ಲಿ ಲಂಚದ ಆಡಿಯೋ ಸಂಭಾಷಣೆ ಮತ್ತು ಖಾಜಾ ಸಾಬ್ ಅವರ ಮೇಲ್ಲಿನ ಹಲ್ಲೆ ಗುಟುರು ಹಾಕುತ್ತಿದೆ.ಇದಕ್ಕೆ ಕಡಿವಾಣ ಹಾಕದಿದ್ದರೆ ಮುಂದೆ ಬಳಗಾನೂರು ಬಳಗಹೊಗೆದ ಬಂಡಿಯಂತೆ ಬೀದಿಯಲ್ಲೇ ನಿಲ್ಲಬೇಕಾಗುತ್ತದೆ. ಜಿಲ್ಲಾಧಿಕಾರಿಗಳ ಆದೇಶದ ಉಲ್ಲಂಗನೆ ಮುಖ್ಯಾಧಿಕಾರಿಗಳ ಕರ್ತವ್ಯ ಲೋಪ ಮತ್ತು ಅಸಿಸ್ತಿಗೆ ಸ್ಪಷ್ಟ ಉದಾಹರಣೆಯಾಗಿದೆ.
ಕೂಡಲೆ ನಮೂನೆ ಮೂರನ್ನು ಕೊಡದಿದ್ದರೆ ಪ್ರತಿಭಟನೆಯ ಎಚ್ಚರಿಕೆಯನ್ನು ಸಂತ್ರಸ್ತರು ನೀಡಿದ್ದಾರೆ.
ಈಗಲಾದರೂ ಎಚ್ಚೆತ್ತು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವರೋ ಅಥವಾ ಜಟ್ಟಿ ಜಾರಿಬಿದ್ದರೂ ಮೀಸೆ ಮಣ್ಣಾಗಿಲ್ಲವೆಂಬ ಮೊಂಡುತನ ತೋರಿಸುವರೋ ಕಾದುನೋಡಬೇಕಿದೆ.




