———————————————–ಅರಸೀಕೆರೆ ತಾಲ್ಲೂಕಿನ ಗೀಜಿಹಳ್ಳಿ ಗ್ರಾಮದ ಬಳಿ
ಅರಸೀಕೆರೆ; ತಾಲೂಕಿನ ಗೀಜೀಹಳ್ಳಿ ಹತ್ತಿರ ಅರಸೀಕೆರೆಯಿಂದ ಹಾಸನಕ್ಕೆ ಹೋಗುತ್ತಿದ್ದ ಸರಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಸುಮಾರು ಪ್ರಾಣಿಕರಿಗೆ ಗಾಯಗೊಂಡಿದ್ದು ಅರಸೀಕೆರೆ ತಾಲೂಕಿನ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದು ಸುಮಾರು ಜನರ ಸ್ಥಿತಿ ಗಂಭೀರವಾಗಿದ್ದು ಹಾಸನ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

ಈ ಅಪಘಾತ ತಿಳಿದು ತಕ್ಷಣ ಗೃಹ ಮಂಡಳಿ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಕೆ ಎಂ ಶಿವಲಿಂಗೇಗೌಡ ನಗರಸಭೆ ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ನಗರದ ಜನ ಪ್ರತಿನಿಧಿಗಳು ಸಮಾಜ ಸೇವಕರು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯವನ್ನು ವಿಚಾರಿಸಿ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಧೈರ್ಯವನ್ನು ತುಂಬಿದರು. ಹೆಚ್ಚಿನ ಚಿಕಿತ್ಸೆಗೆ ಹಾಸನದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲು ಸಹಕರಿಸಿದರು.
ಅಪಘಾತವಾದ ಸ್ಥಳದಲ್ಲಿ ಮಾಧ್ಯಮದೊಂದಿಗೆ ಶಾಸಕರು ಮಾತನಾಡಿದರು.
ವರದಿ. ರಾಜು ಅರಸೀಕೆರೆ




