—————————ಎರಡನೇ ದಿನವೂ ಮುಂದುವರೆದ ವಿಕೆಟ್ ಗಳ ಪತನ
ಕೋಲ್ಕತ್ತಾ: ಪ್ರವಾಸಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದಿರುವ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನವೂ ವಿಕೆಟ್ ಗಳ ಪತನ ಮುಂದುವರೆದಿದೆ.
ಈಡರ್ನ್ ಗಾಡರ್ನ್ ಮೈದಾನದಲ್ಲಿ ಎರಡನೇ ದಿನ ಭೋಜನ ವಿರಾಮದ ನಂತರ ಆಟದಲ್ಲಿ ಭಾರತ ತಂಡವೂ ತನ್ನ ಮೊದಲ ಸರದಿಯಲ್ಲಿ 7 ವಿಕೆಟ್ ಗೆ 187 ರನ್ ಗಳಿಸಿದ್ದು, 28 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿತ್ತು. ಪಂದ್ಯದ ಮೊದಲ ದಿನ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡವು 159 ರನ್ ಗಳಿಗೆ ಆಲ್ ಔಟ್ ಆಗಿತ್ತು.
ಸ್ಕೋರ್ ವಿವರ
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 159
ಭಾರತ 7 ವಿಕೆಟ್ ಗೆ 187
ಕೆ.ಎಲ್. ರಾಹುಲ್ 39, ರಿಷಬ್ ಪಂತ್ 27, ರವೀಂದ್ರ ಜಡೆಜಾ 27,
( ಸಿಮಾನ್ ಹಾರ್ಮರ್ 30 ಕ್ಕೆ 3), ಮಾರ್ಕೊ ಜಾನ್ಸನ್ 35 ಕ್ಕೆ 3)




