ಯಾದಗಿರಿ : ಯಾದಗಿರಿಯಲ್ಲಿ ಘೋರ ಘಟನೆ ಒಂದು ಸಂಭವಿಸಿದ್ದು, KSRTC ಬಸ್ ಹರಿದು ಎರಡು ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಡೆದಿದೆ. ಮೃತ ಮಗುವನ್ನು ಪರಸಪ್ಪ ಹುಣಸ್ಯಾಳ ಎಂಬವರ ಪುತ್ರಿ ಲಕ್ಷ್ಮೀ ಎಂದು ಗುರುತಿಸಲಾಗಿದೆ.
ಬಸ್ ನಿಲ್ದಾಣದ ಪಕ್ಕದಲ್ಲೇ ಪರಸಪ್ಪರ ಮನೆಯಿದ್ದು, ಅಜ್ಜಿ ಮನೆಯಂಗಳದಲ್ಲಿ ಮಗುವನ್ನು ಆಟವಾಡಿಸುತ್ತಾ ಕುಳಿತಿದ್ದರು. ಈ ಮಧ್ಯೆ ಅಜ್ಜಿ ಕಣ್ತಪ್ಪಿಸಿ ಮಗು ಬಸ್ ನಿಲ್ದಾಣ ಕಡೆಗೆ ಹೋಗಿದೆ.
ಅದೇ ವೇಳೆ ನಿಲ್ದಾಣಕ್ಕೆ ಬಂದು ನಿಲುಗಡೆಯಾಗುತ್ತಿತ್ತು. ಬಸ್ಸಿನ ಚಕ್ರದಡಿಗೆ ಸಿಲುಕಿ, ಸ್ಥಳದಲ್ಲೇ ಕೊನೆಯುಸಿರೆಳೆದಿದೆ ಎಂದು ತಿಳಿದು ಬಂದಿದೆ ಈ ಕುರಿತು ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




