ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿನತ್ತ ದಾಪುಗಾಲು ಹಾಕಿದೆ.
ಇಲ್ಲಿನ ಈಡರ್ನ್ ಗಾರ್ಡನ್ ಮೈದಾನದಲ್ಲಿ ಎರಡನೇ ದಿನದಾಟ ಮುಗಿದಾಗ ದಕ್ಷಿಣ ಆಫ್ರಿಕಾ ತನ್ನ ದ್ವಿತೀಯ ಸರದಿಯಲ್ಲಿ 7 ವಿಕೆಟ್ ಗೆ 93 ರನ್ ಗಳಿಸಿದ್ದು, ಒಟ್ಟಾರೆ ಪಂದ್ಯದಲ್ಲಿ 63 ರನ್ ಗಳ ಮುನ್ನಡೆಯನ್ನು ಮಾತ್ರ ಪಡೆದಿದೆ. ಪ್ರವಾಸಿ ತಂಡದ ಕೈಯಲ್ಲಿ ಈಗ ಮೂರು ವಿಕೆಟ್ ಗಳು ಮಾತ್ರ ಉಳಿದುಕೊಂಡಿದ್ದು, ಭಾರತಕ್ಕೆ 100 ರನ್ ಗಳ ಗೆಲುವಿನ ಗುರಿ ನೀಡಿದರೇನೇ ದೊಡ್ಡದು ಎಂಬಂತೆ ಆಗಿದೆ.
ಭಾರತದ ಪರವಾಗಿ ರವೀಂದ್ರ ಜಡೆಜಾ 29 ಕ್ಕೆ 4 ವಿಕೆಟ್ ಪಡೆದು ಪ್ರವಾಸಿ ತಂಡದ ತೀವ್ರ ಕುಸಿತಕ್ಕೆ ಕಾರಣರಾದರು. ಕುಲದೀಪ್ ಯಾದವ್ 2 ಹಾಗೂ ಅಕ್ಷರ ಪಟೇಲ್ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ದಕ್ಷಿಣ ಆಫ್ರಿಕಾ 159 ಹಾಗೂ 7 ವಿಕೆಟ್ ಗೆ 93
ಭಾರತ 189




