Ad imageAd image

ಮಕ್ಕಳ ದಿನಾಚರಣೆ ನಿಮಿತ್ತಪಾಲಕರ ಸಭೆ

Bharath Vaibhav
ಮಕ್ಕಳ ದಿನಾಚರಣೆ ನಿಮಿತ್ತಪಾಲಕರ ಸಭೆ
WhatsApp Group Join Now
Telegram Group Join Now

ಬಸವನ ಬಾಗೇವಾಡಿ: ತಾಲೂಕಿನ ಹೂವಿನ ಹಿಪ್ಪರಗಿಯ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ *ದಿನಾಚರಣೆ*ಪ್ರಯುಕ್ತ ಪಾಲಕ ಪೋಷಕ ಮತ್ತು ಶಿಕ್ಷಕ ಮಹಾಸಭೆ ಯನ್ನು ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.

ಪಾಲಕ ಪೋಷಕ ಶಿಕ್ಷಕ ಮಹಾಸಭೆಯಲ್ಲಿ ಪಾಲ್ಗೊಂಡ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮೀತಿಯ ಅಧ್ಯಕ್ಷರು ಸದಸ್ಯರು ಮತ್ತು ಗ್ರಾಮದ ಶಿಕ್ಷಣ ಪ್ರೇಮಿಗಳು ಪಾಲಕ ಪೋಷಕ ಬಂಧುಗಳನ್ನು ಅತ್ಯಂತ ಗೌರವಯುತವಾಗಿ ಪುಷ್ಪಗುಚ್ಚ ನೀಡುವುದರ ಜೊತೆಗೆ ಪುಷ್ಪವೃಷ್ಟಿ ಮಾಡುವ ಮೂಲಕ ಅವರನ್ನು ವೇದಿಕೆಗೆ ಕರೆತರಲಾಯಿತು.

ಸ್ವಾಗತ ಗೀತೆ ಪ್ರಾರ್ಥನೆ ನಂತರ ಉದ್ಘಾಟಗೊಂಡ ಮಹಾಸಭೆಯು ವ್ಯವಸ್ಥಿತವಾಗಿ ಸಾಗಿತು ಭಾರತದ ಸಂವಿಧಾನದ ಪೀಠಿಕೆಯನ್ನು ಓದಿ ಹೇಳಲಾಯಿತು ನಂತರ ಪ್ರಸ್ತಾವಿಕವಾಗಿ ಮಾತನಾಡಿದ ಶಾಲೆಯ ಮುಖ್ಯ ಗುರುಗಳು ಮಲ್ಲಿಕಾರ್ಜುನ ರಾಜನಾಳ ರವರು ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಸಿಗುವ ಸರ್ಕಾರಿ ಸೌಲಭ್ಯಗಳ ಕುರಿತು ಪಾಲಕರಿಗೆ ತಿಳಿಸುತ್ತಾ ಶಾಲೆಯಲ್ಲಿ ಸಿಗುವ ಕ್ಷೀರಭಾಗ್ಯ ಯೋಜನೆ. ರಾಗಿಮಾಲ್ಟ್.. ಮಧ್ಯಾಹ್ನ ಬಿಸಿ ಊಟ. ಮೊಟ್ಟೆ ಬಾಳೆಹಣ್ಣು .ಉಚಿತ ಪಠ್ಯಪುಸ್ತಕ. ಉಚಿತ ಸಮವಸ್ತ್ರ .ಉಚಿತ ಶೂ ಸಾಕ್ಸ್ .ಸ್ಕಾಲರ್ಶಿಪ್ ಮತ್ತು ನುರಿತ ಶಿಕ್ಷಕರಿಂದ ಗುಣಾತ್ಮಕ ಬೋಧನೆ.

ಸರ್ಕಾರದ ಯೋಜನೆಗಳು ಕುರಿತು ಪಾಲಕರಿಗೆ ಪರಿಚಯ ನೀಡಿದರು ಮುಂದುವರಿದು ಶಾಲೆಗೆ ನೀಡಿದ ದೇಣಿಗೆ ವಿಚಾರವನ್ನು ಮಾತನಾಡಿ ಸಾಕಷ್ಟು ಶಿಕ್ಷಣ ಪ್ರೇಮಿಗಳು ಶಾಲೆಗೆ ಕೊಡುಗೆ ನೀಡಿದ್ದಾರೆ ಅದರಲ್ಲಿ 75,000 ಮೌಲ್ಯದ ಸ್ಮಾರ್ಟ್ ಟಿವಿಯನ್ನು ನೀಡಿದ ಗ್ರಾಮದ ಶಿವು ಗುಂಡಾನವರ ಮತ್ತು ಶಿವಾನಂದ ಶಿವಯೋಗಿ ಯವರನ್ನು ಸ್ಮರಣೆ ಮಾಡಿ ಅವರಿಗೆ ಅಭಿನಂದನೆಗಳು ಹೇಳುವುದರ ಜೊತೆಗೆ ಶಾಲೆಗೆ ರಾಮಚಂದ್ರ ಹೂಗಾರ ಬಾಬು ಮಸಬಿನಾಳ ಶ್ರೀ ಗುಂಡಾನವರವರು ಶಾಲೆಗೆ ಜಮಖಾನೆ ಪ್ಯಾನುಗಳ ಕೊಡುಗೆ ಮತ್ತು ಗ್ರಾಮ ಪಂಚಾಯತಿಯಿಂದ ಶಾಲೆಗೆ ಸಿಸಿ ಕ್ಯಾಮರಾ ಅಳವಡಿಸಿರುವದನ್ನು ಸ್ಮರಿಸಿ ಇಲಾಖೆಯ ಪರವಾಗಿ ಧನ್ಯವಾದಗಳನ್ನು ಹೇಳಿದರು.
ಹಾಗೆ ಇದು ಹೆಣ್ಣುಮಕ್ಕಳ ಶಾಲೆಯಾದ ಪ್ರಯುಕ್ತ ಪೋಸ್ಕೊ ಕಾಯ್ದೆ ಕುರಿತು ಪಾಲಕರಲ್ಲಿ ಜಾಗೃತಿ ಮೂಡಿಸಿದರು ಜೊತೆಗೆ ಮಕ್ಕಳು ಓದಿನ ಕಡೆಗೆ ಗಮನಹರಿಸಿ ಮಕ್ಕಳ ಕಲಿಕೆಯ ಜೊತೆ ಅವರಲ್ಲಿ ಸಂಸ್ಕಾರ ದೇಶಭಕ್ತಿ ಶಿಸ್ತು ಸಂಯಮ ಮೊದಲಾದ ವ್ಯಕ್ತಿತ್ವದ ಮಜಲುಗಳನ್ನು ಮಕ್ಕಳಲ್ಲಿ ಮೂಡುವಂತೆ ಮಾಡಬೇಕಾದ ಕರ್ತವ್ಯ ಮತ್ತು ಅನಿವಾರ್ಯತೆ ಪಾಲಕ ಶಿಕ್ಷಕರಾದ ನಮ್ಮಿಬ್ಬರ ಮೇಲೆ ಜಾಸ್ತಿನೆ ಇದೆ ಎಂದು ತಿಳಿಸಿದರು.

ಶಾಲೆಯು ಇನ್ನು ಅಭಿವೃದ್ಧಿ ಪಥದತ್ತ ಸಾಗಲು ಭಾಗವಹಿಸಿದ ಪಾಲಕರ ಸಲಹೆಗಳನ್ನು ಆಲಿಸಿ ಅವುಗಳನ್ನ ಅನುಪಾಲನೆಗೆ ತರಲಾಗುವುದೆಂದು ತಿಳಿಸಿದರು.  ನಂತರ ಎಲ್ಲರಿಗೂ ಸಿಹಿ ಪಾಯಸ ಮತ್ತು ಪಲಾವ್ ಊಟ ಮಾಡಿ ಎಲ್ಲ ಪಾಲಕರು ಶಾಲೆಯ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಖುಷಿ ಪಟ್ಟರು.
ಇದೆ ಸಮಯದಲ್ಲಿ ರಾಜಶೇಖರ್ ಬ್ಯಾಕೋಡ ಬಾಬು ಮಸಬಿನಾಳ ರೇವಣಪ್ಪ ತೋಟದ ಬಾಬು ಬಿರಾದಾರ್ ಲಕ್ಷ್ಮಿ ಚೌದರಿ ಸಿದ್ದಪ್ಪ ಬಜಂತ್ರಿ ಅನೇಕ ಪಾಲಕರು ಪೋಷಕರು ಶಿಕ್ಷಣ ಪ್ರೇಮಿಗಳು ಮತ್ತು ಶಿಕ್ಷಕರು ಗುರು ಮಾತೆಯರು ಪಾಲ್ಗೊಂಡಿದ್ದರು.

ವರದಿ: ಕೃಷ್ಣ ಎಚ್ ರಾಠೋಡ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!