Ad imageAd image

ಮಕ್ಕಳ ದಿನಾಚರಣೆಯ ಪ್ರಯುಕ್ತ ಗಡಿಗ್ರಾಮಗಳ ಶಾಲೆಗಳಿಗೆ ಬೇಟಿ ನೀಡಿದ ಅನಿಲ್ ಪೊಟೇಲಿ

Bharath Vaibhav
ಮಕ್ಕಳ ದಿನಾಚರಣೆಯ ಪ್ರಯುಕ್ತ ಗಡಿಗ್ರಾಮಗಳ ಶಾಲೆಗಳಿಗೆ ಬೇಟಿ ನೀಡಿದ ಅನಿಲ್ ಪೊಟೇಲಿ
WhatsApp Group Join Now
Telegram Group Join Now

ಸೇಡಂ: ಮಕ್ಕಳ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷರಾದ ಅನಿಲ್ ಪೊಟೇಲಿ ಅವರು ಸೇಡಂ ತಾಲೂಕಿನ ಗಡಿಗ್ರಾಮಲಾದ ಸಿಲಾರಕೋಟ್, ಮೇದಕ್, ಯಾನಗುಂಧಿ, ಬುರಗಪಲ್ಲಿ, ಸೇರಿದಂತೆ ವಿವಿಧ ಹಳ್ಳಿಗಳ ಶಾಲೆಗಳಿಗೆ ಬೇಟಿ ನೀಡಿ ಊಟ ಮತ್ತು ಶಿಕ್ಷಣ ಕುರಿತು ಪರಿಶೀಲನೆ ಮಾಡಿ ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಅವರು ಸರಕಾರಿ ಶಾಲೆಗಳಲ್ಲಿ ಅಧಿಕವಾಗಿ ದೀನದಲಿತರ ಮಕ್ಕಳು, ಕೂಲಿಕಾರ್ಮಿಕರ ಮಕ್ಕಳು, ರೈತರ ಮಕ್ಕಳೇ ಹೆಚ್ಚಾಗಿ ಶಿಕ್ಷಣ ಪಡೆಯುತ್ತಾರೆ ಅದರಿಂದ ನಮ್ಮ ಭಾಗದ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಜವಾಬ್ದಾರಿ ಹೊತ್ತು ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿನ ಕೀರ್ತಿ ಹೆಚ್ಚಿಸುವ ಪ್ರಯತ್ನ ಮಾಡಬೇಕು.

ಕಳೆದ ವರ್ಷ ನಮ್ಮ ಕಲಬುರಗಿ ಜಿಲ್ಲೆಯು ಅತ್ಯಂತ ಕಡಿಮೆ ಫಲಿತಾಂಶ ಪಡೆದಿದೆ ಇದಕ್ಕೆ ಕಾರಣ ಈ ಭಾಗದ ಪರಭಾಷೆ ಪ್ರಭಾವ ಕೂಡ ಇದೆ ಶಿಕ್ಷಕರು ಇದನ್ನು ಗಮನದಲ್ಲಿ ಇಟ್ಟುಕೊಂಡು ಮಕ್ಕಳಿಗೆ ಅದಷ್ಟು ನಮ್ಮ ಭಾಷೆಯ ಬಗ್ಗೆ ಅರಿವು ಮೂಡಿಸಬೇಕು, ಪಾಲಕರ ಜೊತೆ ಕೂಡ ಕನ್ನಡದಲ್ಲಿ ಮಾತನಾಡಿ, ನೀವು ಪ್ರಯತ್ನ ಮಾಡಿದರೆ ಬದಲಾವಣೆ ಮಾಡಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷರಾದ ಅನಿಲ್ ಪೊಟೇಲಿ, ಕಾರ್ಯಾಧ್ಯಕ್ಷರಾದ ಸಾಬಪ್ಪ ಅಬ್ಬಗಳ ಮತ್ತು ಶಾಲೆಯ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!