—————————————–ದೂರು ನಂತರ ಅಧಿಕಾರಿಗಳ ದಿಢೀರ್ ಪರಿಶೀಲನೆ
ಚಿಕ್ಕೋಡಿ: ಅಂಬೇಡ್ಕರ್ ಭವನದಲ್ಲಿ ಅನಧಿಕೃತವಾಗಿ ಚಪ್ಪಲಿ ಮತ್ತು ಬಟ್ಟೆಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂಬ ಗಂಭೀರ ದೂರು ಹಿನ್ನೆಲೆಯಲ್ಲಿ, ಇಂದು ಜಿಲ್ಲಾ ಅಧಿಕಾರಿಗಳಿಂದ ಸ್ಥಳೀಯ ಮಟ್ಟದಲ್ಲಿ ದಿಢೀರ್ ಪರಿಶೀಲನೆ ನಡೆಯಿತು.
ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ದೃಶ್ಯ, ದಾಖಲೆಗಳನ್ನು ಪರಿಶೀಲಿಸುವುದು, ವ್ಯಾಪಾರಿಗಳೊಂದಿಗೆ ಮಾತನಾಡುವುದು. ನಿತೇಶ್ ಪಟ್ಟಣ ವಕೀಲರು ಮತ್ತು ಶಶಿಕಾಂತ್ ಬಾಡಗಿ ವಕೀಲರು ಅಥಣಿ ಮೇಲಾಧಿಕಾರಿಗಳಿಗೆ ದೂರು ನೀಡಿದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು.
ಇಲ್ಲಿ ವ್ಯಾಪಾರಕ್ಕೆ ಯಾವ ಯಾರಿಂದ ಅನುಮತಿ ನೀಡಲಾಗಿದೆ? ಅಧಿಕೃತ ದಾಖಲೆ ತೋರಿಸಿ.”ಯಾರೇ ಆಗಿರಲಿ, ಅಧಿಕೃತ ಆದೇಶವಿಲ್ಲದೆ ಸ್ಥಳ ಬಳಕೆ ಮಾಡುವುದು ಕಾನೂನಿಗೆ ವಿರುದ್ಧ. ಇದಕ್ಕೆ ಸಂಬಂಧಿಸಿದ ವರದಿ ತಕ್ಷಣ ಸಿದ್ಧಪಡಿಸಬೇಕು.
ಅಂಬೇಡ್ಕರ್ ಭವನವನ್ನು ಜನೋಪಯೋಗಿ ಕಾರ್ಯಕ್ರಮಗಳಿಗೆ ಬಳಸಬೇಕು. ಇದನ್ನು ಮಾರುಕಟ್ಟೆ ಮಾಡಿದಂತೆ ಅನಧಿಕೃತವಾಗಿ ಕೊಡುತ್ತಿರುವುದು ತಪ್ಪು. ಅದಕ್ಕಾಗಿಯೇ ನಾನು ದೂರು ನೀಡಿದ್ದೆ. ಪರಿಶೀಲನೆಯ ಬಳಿಕ, ಸಂಬಂಧಿಸಿದ ಸಿಬ್ಬಂದಿಯಿಂದ ಸ್ಪಷ್ಟನೆ ಕೇಳುವುದಾಗಿ ಅಧಿಕಾರಿಗಳು ತಿಳಿಸಿದರು. ಅನಧಿಕೃತ ಮಾರಾಟಕ್ಕೆ ಅವಕಾಶ ನೀಡಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದರು.
ದೂರು ಬಂದ ನಂತರ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಭವನವನ್ನು ವ್ಯಾಪಾರಕ್ಕಾಗಿ ಬಳಸಲು ಪುರಸಭೆಯಿಂದ ಯಾವುದೇ ಅನುಮತಿ ನೀಡಲಾಗಿಲ್ಲ. ಜವಾಬ್ದಾರಿ ಇರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ಸ್ಥಳಗಳ ದುರುಪಯೋಗವನ್ನು ತಡೆಯಲು ಹಾಗೂ ಪಾರದರ್ಶಕತೆಗೆ ಪುರಸಭೆ ಮುಂದಾಗಬೇಕು. ಇದೀಗ ಈ ಘಟನೆ ಸಂಬಂಧಿಸಿದವರಿಗೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರ ಹೇಳಿದ್ದು.
ವರದಿ: ಅಜಯ ಕಾಂಬಳೆ




