ಕಾಗವಾಡ: ಪಟ್ಟಣದ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಹಾರ್ಡ್ವೇರ್ ಅಂಗಡಿಗೆ ಕನ್ನ ಹಾಕಿದ ಕಳ್ಳರ ಗ್ಯಾಂಗ ಅಂಗಡಿ ಮಾಲೀಕರು ಕಳ್ಳರು ಬಂದ ಮಾಹಿತಿ ಪೋಲಿಸರಿಗೆ ಪೋನ ಮುಖಾಂತರ ತಿಳಿಸಿದರಿಂದ ಕಳ್ಳತನ ಯತ್ನಿಸಿ ಪರಾರಿಯಾದ ಘಟನೆ ನಡೆದಿದೆ.

ಬಸ್ ಸ್ಟ್ಯಾಂಡ್ ಪಕ್ಕದಲ್ಲಿರುವ ಹಾರ್ಡ್ವೇರ್ ಅಂಗಡಿ ಗೆ ಪಾಟೀಲ್ ಎಂಬುವರು ಕನ್ನ ಹಾಕಿದ
ಅಂಗಡಿಯ ಮೇಲ್ಚಾವಣಿ ಮುರಿದು ಕಟ್ಟು ಮಾಡಿದ್ದಾರೆ ಎಂದು ಬೆಳಕಿಗೆ ಬಂದಿದೆ. ಹಾಗೂ ನಗದು ಸೇರಿ 16000 ಮೌಲ್ಯದ ಸಾಮಗ್ರಿ ಕಳ್ಳತನ ಮಾಡಲಾಗಿದೆ. ಹಣ ದೋಚುವ ಪ್ರಯತ್ನ ಮಾಡಿದ್ದಾರೆ.
ಕಳ್ಳರ ಮೇಲ್ಚಾವಣಿ ಮುರಿಯುವ ವೇಳೆ ಶಬ್ದ ಕೇಳಿದ ಜನರು ಎದ್ದು ನೋಡಿದಾಗ ನಾಲ್ಕು ಜನರ ಗುಂಪೊದು ಮುಖಕ್ಕೆ ಮಾಸ್ಕ ಹಾಕಿಕೊಂಡು ಕೈಯಲ್ಲಿ ಕಲ್ಲು ಹಿಡಿದು ನಿಂತಿದ್ದನ್ನ ನೋಡಿದ್ದೇವೆ ಎಂದು ಹೇಳಿದರು
.ಕಾಗವಾಡ ಪಟ್ಟಣದಲ್ಲಿ ನಾನು ಪ್ರತಿ ಸಲ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾದ ನಂತರವೇ ಈ ಕೃತ್ಯ ಎಸಗುವುದು ವಿಶೇಷ ಸಂಗತಿ. ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.




