—————ಸ್ವಾಮಿ ವಿವೇಕಾನಂದರ ಶಾಲೆಯಲ್ಲಿ ಕಾರ್ಯ ಕ್ರಮ ವಿಕ್ಷೀಸಿದ ಡಾ. ಬಿ. ಎಂ ಬಳ್ಳಾರಿ
ಬೆಂಗಳೂರು: ಮಕ್ಕಳಿಗೆ ಪಾಠ ಪ್ರವಚನ ದೊಂದಿಗೆ ವಿವಿಧ ಆಟಿಕೆ ಮೂಲಕ ಜ್ಞಾನ ತಂತ್ರಜ್ಞಾನ ತಿಳುವಳಿಕೆ ಕೊಡುವ ಕೆಲಸ ಸ್ವಾಮಿ ವಿವೇಕಾನಂದ ಶಾಲೆಯ ಶಿಕ್ಷಕರು ಮತ್ತು ಸಂಸ್ಥೆಯ ಆಡಳಿತ ಮಂಡಳಿಯವರು ಮಾಡುತ್ತಿರುವುದು ಖುಷಿ ತಂದಿದೆ ಎಂದು ಡಾ. ಬಿ ಎಂ ಬಳ್ಳಾರಿ ಹೇಳಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ಮುಖ್ಯ ರಸ್ತೆ ಡೈರಿ ಸರ್ಕಲ್ ಹತ್ತಿರ ಇರುವ ಸ್ವಾಮಿ ವಿವೇಕಾನಂದ ಶಾಲಾ ಆವರಣದಲ್ಲಿ ಮಕ್ಕಳ ದಿನಾಚರಣೆ ಮತ್ತು ಪಂಡಿತ ಜವಾಹರಲಾಲ್ ನೆಹರು ಅವರ ಹುಟ್ಟು ಹಬ್ಬದ ನಿಮಿತ್ತ ಮಕ್ಕಳಿಂದ ವಸ್ತು ಪ್ರದರ್ಶನ ಏರ್ಪಡಿಸಿದ ಕಾರ್ಯ ಕ್ರಮವನ್ನು ವಿಕ್ಷೀಸಿ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶಾಜೀಯಾಭಾನು ಹೆಚ್ ಎಂ ಅವರು ಸರ್ವರಿಗೂ ಸ್ವಾಗತಿಸಿದರು. ಸಹ ಶಿಕ್ಷಕಿ ಅಲ್ಪಿಯಾಭಾನು ಅವರು ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡ ರಾಜೇಶ್ ಸೇರಿದಂತೆ ವಿದ್ಯಾರ್ಥಿಗಳು ಪೋಷಕರು ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




