ತುರುವೇಕೆರೆ: ತಾಲೂಕಿನ ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದ ಸಮಿತಿ ಹಾಗೂ ನಾಗರೀಕರ ಸಹಕಾರದೊಂದಿಗೆ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನೂತನ ಪಡಿ ಪ್ರತಿಷ್ಠಾಪನೆ ಹಾಗೂ ನೂತನ ಪಡಿಗೆ ಬೆಳ್ಳಿ ಕವಚ ಧಾರಣಾ ಸಮಾರಂಭವನ್ನು ನವೆಂಬರ್ 17 ರಂದು ಸಂಜೆ 7 ಗಂಟೆಗೆ ಆಯೋಜಿಸಲಾಗಿದೆ ಎಂದು ಭಕ್ತವೃಂದ ಸಮಿತಿ ತಿಳಿಸಿದೆ.
ಶ್ರೀ ಅಯ್ಯಪ್ಪಸ್ವಾಮಿಯವರ ಪವಿತ್ರ 18 ಮೆಟ್ಟಿಲು (ಪಡಿಗೆ)ಗಳಿಗೆ ನೂತನವಾಗಿ ಧಾರಣೆ ಮಾಡಲಿರುವ ರಜತ ಕವಚಕ್ಕೆ ನೊಣವಿನಕೆರೆ ವಿರಕ್ತಮಠದ ಶ್ರೀ ಡಾ.ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ವಿಶೇಷ ಪೂಜೆ ನೆರವೇರಿಸಿ, ಭಕ್ತಾಧಿಗಳನ್ನು ಕುರಿತು ಆರ್ಶೀವಚನ ನೀಡಲಿದ್ದಾರೆ.
ನವೆಂಬರ್ 17 ರಂದು ಸೋಮವಾರ ರಾತ್ರಿ 7.30 ಕ್ಕೆ ನೊಣವಿನಕೆರೆ ವಿರಕ್ತಮಠದ ಕಿರಿಯ ಶ್ರೀಗಳಾದ ಶ್ರೀ ಅಭಿನವ ಕಾಡಸಿದ್ದೇಶ್ವರಸ್ವಾಮಿಗಳ ಅಮೃತಹಸ್ತದಿಂದ ಪಡಿಗೆ ರಜತ ಕವಚ ಧಾರಣೆಯೊಂದಿಗೆ ಪಡಿಪ್ರತಿಷ್ಠಾಪನೆ ಹಾಗೂ 8 ಗಂಟೆಗೆ ಬೆಳ್ಳಿ ಕವಚಕ್ಕೆ ದೇಣಿಗೆ ನೀಡಿರುವ ದಾನಿಗಳಿಗೆ ಗೌರವ ಸಮರ್ಪಣೆ, ನಂತರ ಸ್ವಾಮಿಯವರಿಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದ ಸಮಿತಿ ಕೋರಿದೆ.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




